ಇಂಡಿ ತಾಲೂಕಿನ ಅರ್ಜುಣಗಿ ಬಿ.ಕೆ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಫ್ಯಾನ್‌ಗಳನ್ನು ಕೊಡುಗೆಯಾಗಿ ನೀಡಿದ ನಾಗೇಶ ಬಿರಾದಾರ ಅವರನ್ನು ಸನ್ಮಾನಿಸಲಾಯಿತು. ಮಹಾಂತೇಶ ತಾವರಖೇಡ, ಎಸ್.ಸಿ.ಇಂಗಳಗಿ, ಲಾಲಬಾಷಾ ಚಬನೂರ ಇತರರಿದ್ದರು. 
ಜಿಲ್ಲೆ

ಹಳೇ ವಿದ್ಯಾರ್ಥಿಗಳು ಕಲಿತ ಶಾಲೆ ಏಳಿಗೆಗೆ ಶ್ರಮಿಸಲಿ

ಇಂಡಿ: ಸಮಾಜದಲ್ಲಿ ಹಣ ಮಾಡುವುದಕ್ಕಾಗಿ ಅನೇಕ ಸಂಘಟನೆಗಳು ಹುಟ್ಟಿಕೊಳ್ಳುತ್ತವೆ. ಆದರೆ ತಾವು ಕಲಿತ ಶಾಲೆಯ ಮಕ್ಕಳ ಏಳಿಗೆಗಾಗಿ ಸಹಾಯ ಮಾಡುವವರು ಕಡಿಮೆ. ಹಳೇ ವಿದ್ಯಾರ್ಥಿಗಳು ತಾವು ಕಲಿತ ಶಾಲೆ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಅರ್ಜುಣಗಿ ಬಿ.ಕೆ ಗ್ರಾಮದ ಸರ್ಕಾರಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಮಹಾಂತೇಶ ತಾವರಖೇಡ ಹೇಳಿದರು.

ತಾಲೂಕಿನ ಅರ್ಜುಣಗಿ ಬಿ.ಕೆ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಪ್ರೌಢಶಾಲೆಯಲ್ಲಿ ‘ನನ್ನ ಶಾಲೆ ನನ್ನ ಜವಾಬ್ದಾರಿ’ ಕಾರ್ಯಕ್ರಮದಡಿ ನಾಗೇಶ ಬಿರಾದಾರ ಸಹೋದರರು ಅಂದಾಜು 20 ಸಾವಿರ ರೂ. ಮೌಲ್ಯದ ಗೋಡೆ ್ಯಾನ್‌ಗಳನ್ನು ಕೊಡುಗೆಯಾಗಿ ನೀಡಿದ್ದಕ್ಕೆ ಸೋಮವಾರ ನಡೆದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಮುಖ್ಯೋಪಾಧ್ಯಾಯ ಎಸ್.ಸಿ.ಇಂಗಳಗಿ ಮಾತನಾಡಿ, ಈ ಶಾಲೆಯಲ್ಲಿ ಉತ್ತಮ ಶಿಕ್ಷಕರ ವೃಂದವಿದ್ದು, ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದರು. ನಾಗೇಶ ಬಿರಾದಾರ ಅವರನ್ನು ಸನ್ಮಾನಿಸಲಾಯಿತು. ಲಾಲಬಾಷಾ ಚಬನೂರ, ನಾಗೇಶ ಪರೀಟ, ಶಿವಾನಂದ ಪಾರೆ, ಮಹಾಂತೇಶ ಹೊಸುರ ಇತರರಿದ್ದರು.