ಕಂಪ್ಲಿ ತಹಸೀಲ್ದಾರ್ ಶಿವರಾಜಗೆ ರಾಜ್ಯ ಅನುದಾನಿತ ಶಾಲೆ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ತಾಲೂಕು ಘಟಕ ಮನವಿ ಸಲ್ಲಿಸಿತು. ಪ್ರಮುಖರಾದ ಅಂಬಿಗರ ಮಂಜುನಾಥ, ಎ.ಎಂ.ಬಸವರಾಜ, ಅಮರೇಶ, ಅಶೋಕ್ ರಡ್ಡೇರ್ ಇತರರಿದ್ದರು. 
ಜಿಲ್ಲೆ

ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಿ

ಕಂಪ್ಲಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅನುದಾನಿತ ಶಾಲೆ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ತಾಲೂಕು ಘಟಕ ಶನಿವಾರ ತಹಸೀಲ್ದಾರ್ ಶಿವರಾಜಗೆ ಮನವಿ ಸಲ್ಲಿಸಿತು.

ಸಂಘದ ತಾಲೂಕು ಅಧ್ಯಕ್ಷ ಎ.ಎಂ.ಬಸವರಾಜ ಮಾತನಾಡಿ, ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದಂತೆ ಕೂಡಲೇ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೊಳಿಸಬೇಕು. 2014ರ ವಿಧೇಯಕ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ಸಂಘದ ರಾಜ್ಯ ಸಹ ಕಾರ್ಯದರ್ಶಿ ಅಂಬಿಗರ ಮಂಜುನಾಥ ಮಾತನಾಡಿ, ಒಪಿಎಸ್ ಜಾರಿ ವಿಳಂಬವಾದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ನೀಡುತ್ತಿರುವ ಎನ್‌ಪಿಎಸ್ ಅನ್ನು ಯಥಾವತ್ತಾಗಿ ಜಾರಿ ಮಾಡಬೇಕು. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ದಶಕಗಳಿಂದ ಖಾಲಿಯಿರುವ ಹುದ್ದೆಗಳನ್ನು ಭರ್ತಿಮಾಡಬೇಕು. ಜ್ಯೋತಿ ಸಂಜೀವಿನಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಅಮರೇಶ, ಜಿ.ಮೇಲಾರೆಡ್ಡಿ, ಅಶೋಕ್ ರಡ್ಡೇರ್, ವೆಂಕಟರಮಣ, ಬೀರಲಿಂಗೇಶ್ವರ, ರಾಜು ಬಿಲಂಕರ್, ಅನ್ನದಾನೇಶ್, ಪಿ.ರುದ್ರಪ್ಪ, ಕಾಮಗಂಡಿ ಮಂಜುನಾಥ ಇತರರಿದ್ದರು.