ಜಿಲ್ಲೆ

Suicide ಕಟ್ಟಡದ 4 ನೇ ಮಹಡಿಯಿಂದ ಜಂಪ್‌ ಮಾಡಿದ ವೃದ್ಧ

Uttara Kannada - Subash Hegde

ಕಾರವಾರ:ಮಕ್ಕಳ ನಡುವಿನ ಜಗಳದಿಂದ ನೊಂದ ವೃದ್ಧನೊಬ್ಬ ಬಹು ಮಹಡಿ ಕಟ್ಟಡದಿಂದ ಬಿದ್ದು ಆತ್ಮಹತ್ಯೆ suicide ಮಾಡಿಕೊಂಡ ಘಟನೆ ಶುಕ್ರವಾರ ನಗರದ ಶಂಕರ ಮಠ ರಸ್ತೆಯ ಮನೋರಮಾ ಅಪಾರ್ಟ್ಮೆಂಟ್‌ನಲ್ಲಿ ನಡೆದಿದೆ. ಕೃಷ್ಣಾನಂದ ಶಿವರಾಮ ಪಾವಸ್ಕರ್(76)ಮೃತರು.

Suicide ಏಕೆ..

ಅಪಾರ್ಟ್ಮೆಂಟ್ ಸಮೀಪದ ಚಿಕ್ಕ ಮಗ ಶ್ರೀಹರಿ ಅವರ ಮನೆಯಲ್ಲಿ ಅವರು ವಾಸವಿದ್ದರು. ಹಿರಿಯ ಮಕ್ಕಳಿಬ್ಬರು ಬೇರೆ ವಾಸವಿದ್ದರು. ಮಕ್ಕಳ ನಡುವೆ ಪರಸ್ಪರ ಗಲಾಟೆ ಇತ್ತು ಎನ್ನಲಾಗಿದೆ. ಶುಕ್ರವಾರ ಮಧ್ಯಾಹ್ನ ಮನೆಯಿಂದ ಹೊರ ಹೋದವರು ಪಕ್ಕದ ಅಪಾರ್ಟ್ಮೆಂಟ್‌ನ 4 ನೇ ಮಹಡಿ ಮೇಲೆ ಹತ್ತಿ ಕೆಳಗೆ ಹಾರಿದ್ದಾರೆ. ತಂದೆಯ ದೇಹದ ಎದುರು ಮಕ್ಕಳು ಜಗಳ ಮಾಡಿಕೊಳ್ಳುತ್ತಿರುವುದು ಕಂಡುಬAದು ಶಹರ ಠಾಣೆ ಪೊಲೀಸರು ಆಗಮಿಸಿ ಎಲ್ಲರನ್ನೂ ಠಾಣೆಗೆ ಕರೆದೊಯ್ದಿದ್ದಾರೆ.