ಜಿಲ್ಲೆ

ಇಲಿ ಪಾಷಣ ಕುಡಿದು ವೃದ್ಧ ಸಾವು

ರಾಜಣ್ಣ

ಕೊಳ್ಳೇಗಾಲ: ಬೀಡಿ, ಸಿಗರೇಟ್ ಸೇದಬೇಡಿ ಎಂದು ಮಕ್ಕಳು ಹೇಳಿದ್ದಕ್ಕೆ ವೃದ್ಧರೊಬ್ಬರು ಇಲಿ ಪಾಷಣ ಕುಡಿದು ಮೃತಪಟ್ಟಿದ್ದಾರೆ.
ಆನಂದ ಜ್ಯೋತಿ ಕಾಲನಿ ನಿವಾಸಿ ಮಾದಯ್ಯ (78) ಆತ್ಮಹತ್ಯೆ ಮಾಡಿಕೊಂಡವರು.


ಇವರು ಕಳೆದ 4 ವರ್ಷಗಳಿಂದ ಅಸ್ತಮಾ ರೋಗದಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಚಿಕಿತ್ಸೆ ಪಡೆದಿದ್ದರು. ವ್ಯೆದ್ಯರು ಸಿಗರೇಟ್ ಸೇದದಂತೆ ಸಲಹೆ ನೀಡಿದ್ದರು. ಆದರೂ ಮಾದಯ್ಯ ಸಿಗರೇಟ್, ಬೀಡಿ ಸೇದುತ್ತಿದ್ದರು. ಈ ಬಗ್ಗೆ ಮಾದಯ್ಯನಿಗೂ ಆತನ ಮಕ್ಕಳಿಗೂ ಸಣ್ಣ ಪುಟ್ಟ ಮಾತು ನಡೆದಿತ್ತು. ಬುಧವಾರ ಮನೆಯೊಳಗೆ ಇಲಿ ಪಾಷಣ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.


ತಕ್ಷಣ ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದಿದ್ದು, ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮಾದಯ್ಯ ಮೃತಪಟ್ಟಿದ್ದಾರೆ.


ನನ್ನ ತಂದೆ ಬೀಡಿ ಸೇದಬೇಡಿ ಎಂದಿದಕ್ಕೆ ಜಿಗುಪ್ಸೆಗೊಂಡು ಇಲಿ ಪಾಷಣ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪುತ್ರ ಇಂದ್ರೇಶ್ ಪೊಲೀಸರಿಗೆ ದೂರು ನೀಡಿದ್ದಾರೆ.