ಜಿಲ್ಲೆ

ನ್ಯಾಯಲಯಕ್ಕೆ ಹಾಜರಾಗದ ಆರೋಪಿ ಬಂಧನ!

Mangaluru - Nishantha Narayana

ವಿಟ್ಲ: ಕಳ್ಳತನ ಪ್ರಕರಣದಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬ ೨೦ ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಕೇರಳ ಕ್ಯಾಲಿಕಟ್ ಎರುವತ್ತೂರು ಎಡತಂತರ ನಿವಾಸಿ ನೌಷದ್ ಯಾನೆ ಹಂಸದ್ (೪೬) ಬಂಧಿತ. ೨೦೦೩ರಲ್ಲಿ ನಡೆದ ಕಳ್ಳತನ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಈತ ೨೦ ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ಆ.೨೦ರಂದು ಕೇರಳ ರಾಜ್ಯದ ಕ್ಯಾಲಿಕಟ್ ಜಿಲ್ಲೆಯ ಪೇರಾಂಬರ ಎಂಬಲ್ಲಿ ವಿಟ್ಲ ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಜಯರಾಮ, ದಿನೇಶ್, ಪುನೀತ್ ಮತ್ತು ವಿಠಲ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.