ಅಪಘಾತ ನಡೆದ ಸ್ಥಳದಲ್ಲಿ ಸೇರಿರುವ ಜನ. 
ಜಿಲ್ಲೆ

ಹಳೇ ಕಾರು ಡಿಕ್ಕಿ ಹೊಡೆಸಿ ಕೊಲೆ?

Shivamogga - Desk - Praveena Kumar S

ಸೊರಬ: ಭೂಮಿ ಹುಣ್ಣಿಮೆ ಅಂಗವಾಗಿ ಸಡಗರದಿಂದ ಶನಿವಾರ ನಸುಕಿನಲ್ಲಿ ಹೊಲಕ್ಕೆ ಚರುಗ ಬೀರಲು ಹೋದ ರೈತ ಮಂಜಪ್ಪ(55) ಕುಂಬತ್ತಿ-ಮಾವಲಿ ರಸ್ತೆ ಮಾರ್ಗದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಹರೂರು ಗ್ರಾಮದ ಸಮೀಪ ಇರುವ ತನ್ನ ಜಮೀನಿಗೆ ಮಂಜಪ್ಪ ಚರಗ ಬೀರಿ ಟಿವಿಎಸ್ ವಾಹನದಲ್ಲಿ ಬರುವಾಗ ನಂಬರ್ ಪ್ಲೇಟ್ ಇಲ್ಲದ ಹಳೆಯ ಕಾರು ಡಿಕ್ಕಿ ಹೊಡೆದಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ವಲ್ಪ ದೂರದವರೆಗೆ ಟಿವಿಎಸ್ ವಾಹನವನ್ನು ಎಳೆದುಕೊಂಡು ಹೋಗಿ ಮತ್ತೆ ಸ್ವಲ್ಪ ದೂರದಲ್ಲಿ ಕಾರು ರಸ್ತೆ ಬದಿಯ ಹಳ್ಳಕ್ಕೆ ಇಳಿದಿದೆ. ಆರೋಪಿಗಳು ಕಾರಿನಿಂದ ಪರಾರಿಯಾಗಿದ್ದಾರೆ.
ಮೇಲ್ನೋಟಕ್ಕೆ ಇದು ರಸ್ತೆ ಅಪಘಾತ ಎಂದು ಕಂಡು ಬಂದರೂ ಇದೊಂದು ವ್ಯಸ್ಥಿತವಾಗಿ ನಡೆದ ಕೊಲೆಯಾಗಿದೆ ಎಂದು ಮೃತನ ಕುಟುಂಬ ಅರೋಪಿಸಿದೆ. ಅಲ್ಲದೆ ಜಮೀನು ವಿಚಾರವಾಗಿ ಕುಳವಳ್ಳಿ ಗ್ರಾಮದ ರಕ್ತ ಸಂಬಂಧಿಗಳಾದ ಪ್ರವೀಣ್, ಪವನ್ ಹಾಗೂ ಅವರ ತಂದೆ ಕೆರಿಯಪ್ಪ, ತಾಯಿ ಸರೋಜಾ ಕೊಲೆ ಮಾಡಿದ್ದಾರೆ ಎಂದು ಮಂಜಪ್ಪನ ಹೆಂಡತಿ ಹಾಲಮ್ಮ ಸೊರಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಸಿಪಿಐ ಎಲ್.ರಾಜಶೇಖರ್, ಪಿಎಸ್‌ಐಗಳಾದ ಎನ್.ನಾಗರಾಜ್. ಮಾಳಪ್ಪ ಚಿಪ್ಲಿಕಟ್ಟೆ ಭೇಟಿ ನೀಡಿ ಪರಿಶೀಲಿಸಿದರು.