ನೆಲಮಂಗಲದಲ್ಲಿ ಸಂದೀಪ್ ಸೇವಾನಿಲಯಂ ಹಾಗೂ ಬೆಂಗಳೂರಿನ ನೆಸ್ ಕಂಪನಿ ಸಹಯೋಗದಲ್ಲಿ ನಿರ್ಮಿಸಿರುವ ಹಿರಿಯನಾಗರಿಕರ ವಸತಿ ಗೃಹ(ವೃದ್ಧಾಶ್ರಮ)ವನ್ನು ಬೆಂಗಳೂರಿನ ನೆಸ್ ಕಂಪನಿ ಮುಖ್ಯಸ್ಥ ಶಿವಾದರ್ಶನ್ ಉದ್ಘಾಟಿಸಿದರು. ಗ್ರಾಮಾಂತರ ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಸುಬ್ಬರಾವ್ ಇದ್ದರು. 
ಜಿಲ್ಲೆ

ವೃದ್ದಾಶ್ರಮಗಳ ಹೆಚ್ಚಳ ವಿಪರ್ಯಾಸ

ಶಿವರಾಜ.ಎಂ

ವಿಜಯವಾಣಿಸುದ್ದಿಜಾಲ ನೆಲಮಂಗಲ
ಕೆಲಸಕ್ಕೆಂದು ಹಳ್ಳಿಯಿಂದ ನಗರ ಸೇರಿದ ಮಕ್ಕಳು ಪುನಃ ಹಳ್ಳಿಗಳತ್ತ ಬರುವ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ವೃದ್ಧಾಶ್ರಮಗಳು ಹೆಚ್ಚಾಗಿವೆ ಎಂದು ಬೆಂಗಳೂರಿನ ನೆಸ್ ಕಂಪನಿ ಮುಖ್ಯಸ್ಥ ಶಿವಾದರ್ಶನ್ ತಿಳಿಸಿದರು.
ನಗರಸಭೆ ವ್ಯಾಪ್ತಿಯ ಕೆಂಪಲಿಂಗನಹಳ್ಳಿ ಬೆನಕ ಬಡಾವಣೆಯ ಸಂದೀಪ್ ಸೇವಾ ನಿಲಯಂನಲ್ಲಿ ಆಯೋಜಿಸಿದ್ದ ಸಂದೀಪ್ ಸೇವಾನಿಲಯಂ ಹಾಗೂ ಬೆಂಗಳೂರಿನ ನೆಸ್ ಕಂಪನಿ ಸಹಯೋಗದಲ್ಲಿ ಆರ್ಶೀವಾದ ಶೀರ್ಷಿಕೆಯಡಿ ನಿರ್ಮಾಣ ಮಾಡಿರುವ ಹಿರಿಯನಾಗರೀಕರ ವಸತಿ ಗೃಹ (ವೃದ್ಧಾಶ್ರಮ) ಉದ್ಘಾಟಿಸಿ ಮಾತನಾಡಿದರು.
ತಂದೆ, ತಾಯಿಯರು ಶಿವ ಪಾರ್ವತಿಯೆಂದು ಗೌರವಿಸುವ ಸಂಸ್ಕೃತಿ ನಮ್ಮದು. ಆದರೆ ಇಂದು ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ವಿಪರ್ಯಾಸದ ಸಂಗತಿ. ಆನೇಕ ಕಾರಣಗಳಿಂದ ಮಕ್ಕಳಿಂದ ದೂರವಾದ ತಂದೆ-ತಾಯಿಯರನ್ನು ನೋಡಿಕೊಳ್ಳುವುದು ಮಾನವೀಯ ನೆಲೆಯ ವೃದ್ಧಾಶ್ರಮಗಳಿಗೆ ಸಾಮಾಜಿಕ ವಲಯ ನೆರವು ಹೆಚ್ಚಾಗಬೇಕಾಗಿದೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ವೃದ್ಧರಿಗಾಗಿ ಕಂಪನಿಯ ಸಿಎಸ್‌ಆರ್ ಅನುದಾನದಲ್ಲಿ ವಸತಿ ಗೃಹವನ್ನು ನಿರ್ಮಾಣ ಮಾಡಲಾಗಿದೆ ಎಂದರು.
ಗ್ರಾಮಾಂತರ ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಸುಬ್ಬರಾವ್ ಮಾತನಾಡಿ, ಮಕ್ಕಳ ಭವಿಷ್ಯಕ್ಕಾಗಿ ಹಗಲಿರುಳು ಶ್ರಮಿಸುವ ಪಾಲಕರನ್ನು ಕೆಲ ಮಕ್ಕಳು ವೃದ್ದಾಶ್ರಮಕ್ಕೆ ಸೇರಿಸುತ್ತಿರುವುದು ಬೇಸರದ ಸಂಗತಿ. ಸಾಕಷ್ಟು ಮಂದಿ ತಂದೆತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದು ಅಂತವರಿಗೆ ಹೆಚ್ಚಾಗಿ ತಂದೆ, ತಾಯಿಯ ಬೆಲೆ ಅರ್ಥವಾಗಿರುತ್ತದೆ ಎಂದರು.
ಕಾರ್ಮಿಕ ನಿರೀಕ್ಷಕ ಧನಪಾನ್‌ನಾಯಕ್ ಮಾತನಾಡಿ, ಮಕ್ಕಳು ವೃದ್ಧ ತಂದೆ, ತಾಯಿಯನ್ನು ಕೊನೆಯ ಕ್ಷಣದಲ್ಲಿ ಪ್ರೀತಿಯಿಂದ ಆರೈಕೆ ಮಾಡಿದಲ್ಲಿ ದೈವ ಮುಚ್ಚುತ್ತಾನೆ ಎಂದರು. ಸಂದೀಪ್ ಸೇವಾ ನಿಲಯಂ ಸಂಸ್ಥೆ ಮುಖ್ಯಸ್ಥೆ ಲಿಲ್ಲಿಸಾಮಿಯಲ್, ವ್ಯವಸ್ಥಾಪಕ ಸಮುಯಲ್‌ಪ್ರಭಾಕರ್ ಮತ್ತಿತರರು ಉಪಸ್ಥಿತರಿದರು.