ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದ ಸ್ವಾಮಿ ವಿವೇಕಾನಂದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಯುವಜನತೆಯಲ್ಲಿ ಕರ್ನಾಟಕದ ಪರಿಸರ ಪ್ರಜ್ಞೆ ಕುರಿತ ವಿಶೇಷ ಉಪನ್ಯಾಸದಲ್ಲಿ ಅರಣ್ಯ ಮೌಲ್ಯಮಾಪಕ ಗಿರಿ ವಾಲ್ಮೀಕಿ ಉಪನ್ಯಾಸ ನೀಡಿದರು. 
ಜಿಲ್ಲೆ

ಹವಾಮಾನ ವೈಪರೀತ್ಯದಿಂದ ಮನುಕುಲ ನಾಶ

ಹೂವಿನಹಡಗಲಿ: ಕಾಲೇಜು ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಕೆಲಸವಾಗಬೇಕಿದೆ ಎಂದು ಅರಣ್ಯ ಮೌಲ್ಯಮಾಪಕ ಗಿರಿ ವಾಲ್ಮೀಕಿ ಹೇಳಿದರು.

ದೂರದ ಗಣಿಗಾರಿಕೆಯಿಂದ ನೀರಿನ ಅಭಾವ ಸೃಷ್ಟಿ

ತಾಲೂಕಿನ ಹೊಳಲು ಗ್ರಾಮದ ಸ್ವಾಮಿ ವಿವೇಕಾನಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಯುವಜನತೆಯಲ್ಲಿ ಕರ್ನಾಟಕದ ಪರಿಸರ ಪ್ರಜ್ಞೆ ಕುರಿತು ವಿಶೇಷ ಉಪನ್ಯಾಸದಲ್ಲಿ ಗುರುವಾರ ಮಾತನಾಡಿದರು.

ಇದನ್ನೂ ಓದಿ:

ಪರಿಸರ ಎಂದರೆ ಕೇವಲ ಗಿಡ ಮರಗಳಲ್ಲ. ಪ್ರಕೃತಿ ಮೇಲೆ ಮನುಷ್ಯರು ಅವಲಂಬಿತರಾಗಿದ್ದಾರೆ. ದೂರದ ಗಣಿಗಾರಿಕೆಯಿಂದ ಗ್ರಾಮಗಳಲ್ಲಿ ನೀರಿನ ಅಭಾವ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಹವಾಮಾನದ ವೈಪರೀತ್ಯ ಮನುಕುಲ ನಾಶಕ್ಕೆ ಕಾರಣವಾಗಬಹುದು. ಹಿರಿಕರು ಬೆಳಸಿದ ಪರಿಸರದಿಂದ ನಾವೆಲ್ಲ ಉಸಿರಾಡುತ್ತಿದ್ದೇವೆ. ಸ್ವಚ್ಛಂದ ಗಾಳಿಯನ್ನು ತಗೆದುಕೊಳ್ಳಲು ಪರಿಸರ ಉಳಿಸುವುದು ಅಗತ್ಯ ಎಂದರು.

ವಿದ್ಯಾರ್ಥಿಗಳಿಗೆ ಕರ್ನಾಟಕದ ವಿವಿಧ ಕಾಡುಗಳು, ಪ್ರಾಣಿ ಸಂಕುಲ, ಸಸ್ಯ ಸಂಕುಲ ಹಾಗೂ ಜೀವ ವೈವಿಧ್ಯದ ಬಗ್ಗೆ ಚಿತ್ರ ಸಹಿತ ಮಾಹಿತಿ ನೀಡಿದರು. ಉಪನ್ಯಾಸಕರಾದ ಸಣ್ಣ ನೀಲಪ್ಪ, ಪರಶುರಾಮ್ ನಾಗೋಜಿ ಸೇರಿ ವಿದ್ಯಾರ್ಥಿಗಳು ಇದ್ದರು.