ಜಿಲ್ಲೆ

ಆಯಿಲ್ ಇಂಜಿನ್‌ನಲ್ಲೇ ಬೆಂಗಳೂರಿನಿಂದ ರಾಜಸ್ಥಾನಕ್ಕೆ ಪಯಣ ಬೆಳೆಸಿದ ನಾಲ್ವರು ಕಾರ್ಮಿಕರು

Raichur

ಮಸ್ಕಿ: ಬೆಂಗಳೂರಿನಲ್ಲಿ ಕಳೆದ ಹಲವು ವರ್ಷಗಳಿಂದ ಜ್ಯೂಸ್ ವ್ಯಾಪಾರ ಹಾಗೂ ಕೂಲಿ ಕೆಲಸ ಮಾಡುತ್ತಿದ್ದ ರಾಜಸ್ಥಾನ ಮೂಲದ ನಾಲ್ವರು ಕಾರ್ಮಿಕರು ನಾಲ್ಕು ಚಕ್ರದ ಆಯಿಲ್ ಇಂಜಿನ್ ನಲ್ಲೇ ಮರಳಿ ಊರಿಗೆ ತೆರಳುತಿದ್ದಾರೆ.

ಪಟ್ಟಣದಲ್ಲಿ ಸೋಮವಾರ ಈ ದೃಶ್ಯ ಕಂಡು ಬಂತು. ಕರೊನಾ ಭೀತಿಯಿಂದ ಲಕ್ಷಾಂತರ ಜನರು ಮಹಾ ನಗರಗಳನ್ನು ಖಾಲಿ ಮಾಡುತ್ತಿದ್ದಾರೆ. ತಮ್ಮ ತಮ್ಮ ಊರುಗಳಿಗೆ ಹೋಗಲು ಪರದಾಡುತ್ತಿದ್ದಾರೆ. ಬೆಂಗಳೂರಿನಲ್ಲಿದ್ದ ರಾಜಸ್ಥಾನ ಮೂಲದ ಕಾರ್ಮಿಕರು ಕೆಲಸವಿಲ್ಲದೇ ಹೊಟ್ಟೆ ತುಂಬಿಸಲು ಕಷ್ಟದ ಪರಿಸ್ಥಿತಿ ಎದುರಿಸಿದ್ದಾರೆ. ಏನಾದರೂ ಮಾಡಿ ಮರಳಿ ತಮ್ಮ ಊರಿಗೆ ಹೋಗಲು ಆಯಿಲ್ ಇಂಜಿನ್‌ನಲ್ಲಿ ರಾಜಸ್ಥಾನಕ್ಕೆ ಸಂಚರಿಸುತ್ತಿದ್ದಾರೆ.

ರಾಜಸ್ಥಾನ ತಲುಪಲು ಸುಮಾರು ಇನ್ನೂ 8-10 ದಿನಗಳು ಬೇಕಾಗುತ್ತದೆ. ದಾರಿಯಲ್ಲಿ ಹೊಟೇಲ್‌ಗಳು ಬಂದ್ ಇರುವುದರಿಂದ ಊಟ ಸಿಗುತ್ತಿಲ್ಲ ತೊಂದರೆಯಾಗುತ್ತಿದೆ. ಆದರೂ ಕೂಡ ಅನಿವಾರ್ಯವಾಗಿ ಹೇಗಾದರೂ ಮಾಡಿ ನಮ್ಮ ಊರಿಗೆ ತಲುಪುತ್ತೇವೆ ಎಂದು ಹರಿನಾಥ ತಮ್ಮ ಅಳಲು ತೊಡಿಕೊಂಡರು.