ರಾಯಚೂರು: ಆನ್‌ಲೈನ್ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸದ ಸಹಾಯಕ ಆಯುಕ್ತೆ ಹಾಗೂ ತಹಸೀಲ್ದಾರ್‌ಗಳನ್ನು ಕಂದಾಯ ಸಚಿವ ಕೃಷ್ಣ ಭೈರೇಗೌಡ ತರಾಟೆಗೆ ತೆಗೆದುಕೊಂಡು, ಕಳೆದ ಐದು ತಿಂಗಳಿಂದ ಹೇಳುತ್ತಿದ್ದರೂ ಜನರನ್ನು ಯಾಮಾರಿಸೋದು ನಿಮ್ಮ ಕೆಲಸವಾಗು ಎಂದು ಪ್ರಶ್ನಿಸಿದರು.
ಸ್ಥಳೀಯ ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ಜರುಗಿದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಜನರಿಂದ ಮ್ಯಾನುವಲ್ ಅರ್ಜಿ ಸ್ವೀಕರಿಸದಂತೆ ತಿಳಿಸಿದ್ದರೂ ಅರ್ಜಿ ಸ್ವೀಕರಿಸಿ ಆನ್‌ಲೈನ್‌ಗೆ ಅಪ್‌ಲೋಡ್ ಮಾಡದೇ ಬೇಕಾದವರ ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನರು ದಿನನಿತ್ಯ ಕಚೇರಿಗಳಿಗೆ ತಮ್ಮ ಕೆಲಸಗಳಿಗೆ ಆಗಮಿಸುತ್ತಾರೆ. ಜಿಲ್ಲೆಯ 7 ತಾಲೂಕು ಮತ್ತು 2 ಕಂದಾಯ ಉಪ ವಿಭಾಗ, ಜಿಲ್ಲಾಕಾರಿ ಕಚೇರಿಗಳಲ್ಲಿ 5.76 ಇ-ಕಡತಗಳು ಮ್ಯಾನುವಲ್ ಮೂಲಕ ಪಡೆದು ಹಿಂದಕ್ಕೆ ಹಾಕಲಾಗಿದೆ. ೆ.1ರಿಂದ ಯಾವುದೇ ಕಾರಣಕ್ಕೂ ಮ್ಯಾನುವಲ್ ಅರ್ಜಿ ಸ್ವೀಕರಿಸಬಾರದು ಎಂದು ತಾಕೀತು ಮಾಡಿದರು.
ರೈತರಿಗೆ ಬೆಳೆ ಪರಿಹಾರ ಒದಗಿಸಲು ್ರೂಟ್ಸ್ ತಂತ್ರಾಂಶದಲ್ಲಿ ರೈತರ ಮಾಹಿತಿಯ ದಾಖಲೀಕರಣ ಇನ್ನೆರಡು ದಿನಗಳಲ್ಲಿ ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿ 1.30 ಲಕ್ಷಕ್ಕೂ ಹೆಚ್ಚು ರೈತರ ಮಾಹಿತಿ ದಾಖಲೀಕರಣ ಬಾಕಿಯಿದೆ. ತ್ವರಿತವಾಗಿ ಮಾಹಿತಿಯನ್ನು ಕ್ರೋಢೀಕರಣ ಮಾಡಬೇಕು.
ಬೆಳೆ ಇಲ್ಲದಿದ್ದರೂ ಪರಿಹಾರ ನೀಡುವುದು, ಎನ್‌ಎ ಆಗಿರುವ ಭೂಮಿಗೂ ಪರಿಹಾರ ನೀಡುವುದು ನಡೆಯುತ್ತಿದೆ. ಆಧಾರ್‌ದೊಂದಿಗೆ ಆರ್‌ಟಿಸಿ ಜೋಡಣೆ ಮಾಡುವ ಅವಶ್ಯಕತೆಯಿದೆ. ಈಗಾಗಲೇ ಈ ಕುರಿತು ಕೇಂದ್ರ ಸರ್ಕಾರ ನಿರ್ದೇಶನ ನೀಡಿದ್ದು, ಶೀಘ್ರದಲ್ಲಿ ಜಾರಿಗೆ ಕ್ರಮವಹಿಸಲಾಗುವುದು.
ಬರದೊಂದಿಗೆ ಬೇಸಿಗೆ ಸಮೀಪಿಸುತ್ತಿದ್ದು, ಸಮಸ್ಯಾತ್ಮಕ ಹಳ್ಳಿಗಳನ್ನು ಗುರುತಿಸಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು. ಗ್ರಾ.ಪಂ. ಪಿಡಿಒ, ಗ್ರಾಮ ಲೆಕ್ಕಿಗ, ಸಹಾಯಕ ಇಂಜಿನಿಯರ್ ಒಳಗೊಂಡಂತೆ ಮೂರು ಜನರ ಸಮಿತಿ ರಚಿಸಿ ಸಲ್ಲಿಕೆಯಾಗುವ ಬಿಲ್‌ಗಳಿಗೆ ತಹಸೀಲ್ದಾರರು ಹಣ ಪಾವತಿಸಬೇಕು ಎಂದು ಸೂಚಿಸಿದರು.
ಶಾಸಕ ಬಸನಗೌಡ ದದ್ದಲ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ರೈತರು ಕೊಳವೆಬಾವಿ ಬಳಸಿಕೊಂಡು ಕೃಷಿ ಮಾಡುತ್ತಾರೆ. ಮುಂಚಿತವಾಗಿ ಒಪ್ಪಂದ ಮಾಡಿಕೊಂಡರೆ ಮಾತ್ರ ನೀರು ಕೊಡಲು ಸಾಧ್ಯವಾಗಲಿದೆ ಎಂದರು. ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ಹಿಂದೆ ಖಾಸಗಿ ಕೊಳವೆಬಾವಿ ಮಾಲೀಕರಿಗೆ ಸಕಾಲದಲ್ಲಿ ಹಣ ನೀಡದಿರುವುದರಿಂದ ಅವರು ನೀರು ನೀಡಲು ಹಿಂದೇಟು ಹಾಕುವಂತಾಗಿದೆ ಎಂದು ಹೇಳಿದರು.
ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಟಾಸ್‌ಕೆೆರ್ಸ್ ಸಮಿತಿಯಲ್ಲಿ ಟ್ಯಾಂಕರ್ ನೀರು ಪೂರೈಕೆ, ಕೊಳವೆಬಾವಿ ಬಾಡಿಗೆ, ಪೈಪ್‌ಲೈನ್ ದುರಸ್ತಿಗೆ ಅವಕಾಶವಿದೆ. ಹೊಸ ಕೊಳವೆಬಾವಿ ಕೊರೆಯಲು ಅವಕಾಶವಿಲ್ಲ. ಆರ್‌ಡಿಪಿಆರ್‌ದಿಂದ ಹೊಸ ಕೊಳವೆಬಾವಿ ಕೊರೆಸಬಹುದು. ಜಿಲ್ಲೆಯ 87 ತಾಂಡಾ, ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಸರ್ಕಾರ ಸೂಚನೆ ನೀಡಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸಚಿವ ಎನ್.ಎಸ್.ಬೋಸರಾಜು, ಶಾಸಕರಾದ ಡಾ.ಶಿವರಾಜ ಪಾಟೀಲ್, ಹಂಪನಗೌಡ ಬಾದರ್ಲಿ, ಹಂಪಯ್ಯ ನಾಯಕ, ಬಸನಗೌಡ ದದ್ದಲ್, ಬಸನಗೌಡ ತುರ್ವಿಹಾಳ, ಕಂದಾಯ ಇಲಾಖೆ ಆಯುಕ್ತ ಸುನೀಲಕುಮಾರ, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಜಿಲ್ಲಾಕಾರಿ ಚಂದ್ರಶೇಖರ ನಾಯಕ ಹಾಗೂ ವಿವಿಧ ಇಲಾಖೆ ಅಕಾರಿಗಳು ಉಪಸ್ಥಿತರಿದ್ದರು.