ಜಿಲ್ಲೆ

ಗಂಗೋತ್ರಿಗೆ ಅಧಿಕಾರಿಗಳ ಭೇಟಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಶುಕ್ರವಾರ ಪೇಟೆಯಲ್ಲಿನ ಡಾ. ಗಂಗೂಬಾಯಿ ಹಾನಗಲ್​ ಜನಿಸಿದ ನಿವಾಸ ಗಂಗೋತ್ರಿಗೆ ಬುಧವಾರ ಅಧಿಕಾರಿಗಳು ಭೇಟಿ ನೀಡಿ ಮನೆಯ ಸ್ಥಿತಿ ವೀಕ್ಷಿಸಿದರು.
ಮನೆ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ ಹಿನ್ನೆಲೆಯಲ್ಲಿ ಸದ್ಯದ ಮನೆ ನೆಲಸಮ ಮಾಡಿ ನೂತನ ಕಟ್ಟಡ ನಿರ್ಮಿಸಬೇಕಿದೆ. ಹೀಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಶಿವಕುಮಾರ ಪಾಟೀಲ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮನೆಯ ಸದ್ಯದ ಸ್ಥಿತಿಗತಿ ಪರಿಶೀಲಿಸಿದರು.
ಮನೆ ಸಂಪೂರ್ಣವಾಗಿ ಹಾಳಾಗಿದ್ದರಿಂದ ನವೀಕರಣ ಅಸಾಧ್ಯ. ಸದ್ಯದ ಕಟ್ಟಡವನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿಮಿರ್ಸುವ ಕುರಿತು ವರದಿ ಸಲ್ಲಿಸಲಾಗುವುದು.ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕ್ರಿಯಾಯೋಜನೆ, ನೀಲಿನಕ್ಷೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿದ ಬಳಿಕ ಸರ್ಕಾರ ಅನುದಾನ ನೀಡಿದ ಬಳಿಕ ಹೊಸ ಕಟ್ಟಡ ನಿರ್ಮಿಸಿ ಕೊಡಲಾಗುವುದು ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕ ಕಾರ್ಯಕರ್ತ ಉದಯ ಯಂಡಿಗೇರಿ, ಸ್ಥಳಿಯ ನಿವಾಸಿ ಸಂಜೀವ ಲಕಮನಹಳ್ಳಿ, ಇತರರು ಇದ್ದರು.
ಗಂಗೋತ್ರಿ ನಿವಾಸದ ಶಿಥಿಲಾವಸ್ಥೆ ಕುರಿತು ವಿಜಯವಾಣಿ ದಿನಪತ್ರಿಕೆಯ ಜು. 24ರ ಸಂಚಿಕೆಯಲ್ಲಿ "ಗಂಗೋತ್ರಿ ನಿರ್ಮಾಣಕ್ಕೆ ಕೂಡಿಬರದ ಕಾಲ' ವಿಶೇಷ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.