ಜಿಲ್ಲೆ

ಸುಳ್ಯದಲ್ಲಿ ಬಾಲ್ಯವಿವಾಹಕ್ಕೆ ತಡೆ

Dakshina Kannada

ಸುಳ್ಯ: ಕಂದಡ್ಕ ಎಂಬಲ್ಲಿ ಅಪ್ರಾಪ್ತೆಗೆ ವಿವಾಹ ನಿಶ್ಚಿತಾರ್ಥವಾಗಿದ್ದ ವಿಷಯ ತಿಳಿದ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ಮೂಲಕ ಬಾಲ್ಯ ವಿವಾಹ ತಡೆದಿದ್ದಾರೆ.

ಕಂದಡ್ಕದ ತಮಿಳು ಕಾಲನಿ ನಿವಾಸಿ ಪ್ರತಾಪ(26) ಎಂಬುವನಿಗೆ ಮೈಸೂರಿನ ಹುಡುಗಿಯೊಂದಿಗೆ ವಿವಾಹ ನಿಶ್ಚಯವಾಗಿತ್ತು. ಹುಡುಗಿಗೆೆ 18 ವರ್ಷ ತುಂಬಿಲ್ಲ ಎಂಬುದನ್ನರಿತ ಅಧಿಕಾರಿಗಳು ಹುಡುಗಿಯ ಕಡೆಯವರು ಕಂದಡ್ಕದ ಹುಡುಗನ ಮನೆಗೆ ಬಂದಿದ್ದ ಖಚಿತ ಮಾಹಿತಿ ಮೇರೆಗೆ ಸಿಡಿಪಿಒ ರಶ್ಮಿ ನೇತೃತ್ವದಲ್ಲಿ ಬುಧವಾರ ದಾಳಿ ನಡೆಸಿದ್ದಾರೆ. ಹುಡುಗಿಗೆ 18 ವರ್ಷ ತುಂಬಿದೆ ಎಂದು ದೃಢೀಕರಿಸುವ ದಾಖಲೆ ಕೇಳಿದಾಗ ಹುಡುಗಿಯ ಕಡೆಯವರು ಅದನ್ನು ನೀಡಲು ವಿಫಲರಾದರು.

ಬಳಿಕ ಅವರನ್ನು ಮನವೊಲಿಸಿದ ಅಧಿಕಾರಿಗಳು ಹುಡುಗಿಗೆ ಪ್ರಾಪ್ತ ವಯಸ್ಸು ಆಗದೆ ಮದುವೆ ನಡೆಸುವುದಿಲ್ಲ ಎಂದು ಮುಚ್ಚಳಿಕೆ ಬರೆಸಿಕೊಂಡ ಬಳಿಕ ಅವರನ್ನು ಮೈಸೂರಿಗೆ ಕಳುಹಿಸಿಕೊಟ್ಟರು. ಕಾರ್ಯಾಚರಣೆಯಲ್ಲಿ ಸಹಾಯಕ ಮಕ್ಕಳ ಸಂರಂಕ್ಷಣಾಧಿಕಾರಿ ದೀಪಿಕಾ ಹಾಗೂ ಗ್ರಾಮ್ಕರಣಿಕ ತಿಪ್ಪೇಶ್ ಜೊತೆಗಿದ್ದರು.