ಸಿಂಧನೂರು: ಕಳೆದ ಎರಡು ದಿನದ ಹಿಂದೆ ಜೋಳ ಖರೀದಿಗೆ ರಾಜ್ಯ ಸರ್ಕಾರ ಒಪ್ಪಿಕೊಂಡಿದ್ದು, ಸೋಮವಾರದಿಂದ ಖರೀದಿ ಪ್ರಾರಂಭವಾಗಿದೆ. ಆದರೆ ಕಂಪ್ಲಿಯ ರಾಜ್ಯ ಉಗ್ರಾಣ ನಿಗಮದ ಅಧಿಕಾರಿಗಳು ಬುಧವಾರ ಜೋಳದಲ್ಲಿ ಹುಳ ತುಂಬಿವೆ ಎಂದು ಮತ್ತೆ ಖರೀದಿಗೆ ನಿರಾಕರಣೆ ಮಾಡಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ) ಬಣದ ರಾಜ್ಯ ಘಟಕದ ಪ ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ ತೀವ ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಕೇಂದ್ರ ಉಗ್ರಾಣ ನಿಗಮದ ಅಧಿಕಾರಿಗಳು ಅನಾವಶ್ಯಕವಾಗಿ ಖರೀದಿ ನಿರಾಕರಿಸುತ್ತಿದ್ದಾರೆ ಎಂದು ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಉಗ್ರಾಣ ನಿಗಮದ ಅಧಿಕಾರಿಗಳಿಗೆ ಖರೀದಿ ಜವಾಬ್ದಾರಿ ವಹಿಸಲಾಗಿದೆ.
ಇವರು ಸಹ ಅದೇ ಚಾಳಿಯನ್ನು ಮುಂದುವರೆಸಿದ್ದಾರೆ. ತಾಲೂಕಿನ ಪುನರ್ವಸತಿ ಕ್ಯಾಂಪ್-2ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಮಾರಾಟಕ್ಕೆಂದು ಕಂಪ್ಲಿ ಗೋದಾಮಿಗೆ ತೆಗೆದುಕೊಂಡು ಹೋಗಿದ್ದ 4 ಲಾರಿ ಜೋಳ, ಬಾದರ್ಲಿ ಕೃಷಿ ಪತ್ತಿನ ಸಹಕಾರ ಸಂಘದ 2 ಲಾರಿ, ಸಿಂಧನೂರು ಟಿಎಪಿಸಿಎಂಎಸ್‌ನಿಂದ ತೆಗೆದುಕೊಂಡು ಹೋಗಿದ್ದ 2 ಲಾರಿ ಜೋಳವನ್ನು ನುಸಿ, ಹುಳ ಇವೆ ಎಂದು ಕಂಪ್ಲಿಯ ರಾಜ್ಯ ಉಗ್ರಾಣ ನಿಗಮದ ಅಧಿಕಾರಿಗಳು ಖರೀದಿ ಮಾಡದೆ ತಿರಸ ್ಕರಿಸಿದ್ದಾರೆ. ಅಧಿಕಾರಿಗಳು ರೈತರೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ.
ಅವರು ಮಾಡುವ ಈ ಕಪಟ ನಾಟಕವನ್ನು ನಾವು ಸಹಿಸುವುದಿಲ್ಲ. ಉಗ್ರ ಹೋರಾಟದ ಮೂಲಕ ನ್ಯಾಯ ಪಡೆಯುತ್ತೇವೆ ಎಂದು ಬಸವರಾಜ ಗೋಡಿಹಾಳ ಅಧಿಕಾರಿಗಳಿಗೆ, ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.