ಜಿಲ್ಲೆ

ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಿದ ಅಧಿಕಾರಿಗಳು

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್​ ನಂತರದ ಬಾಲಕ ಹಾಗೂ ಬಾಲಕಿಯರ ವಸತಿ ನಿಲಯಗಳಿಗೆ ಉಪ ಲೋಕಾಯುಕ್ತ ನ್ಯಾ.ಕೆ.ಎನ್​.ಫಣೀಂದ್ರ ಭೇಟಿ ನೀಡಿದಾಗ ವಿದ್ಯಾರ್ಥಿಗಳು ಕೆಲ ಬೇಡಿಕೆ ಸಲ್ಲಿಸಿದ್ದರು. ಅವುಗಳಿಗೆ ಸ್ಪಂದಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಅಧಿಕಾರಿಗಳು ಸಂಜೆ ಹೊತ್ತಿಗೆ ಬೇಡಿಕೆಗಳನ್ನು ಈಡೇರಿಸಿದ್ದಾರೆ.

ಬಾಲಕಿಯರ ವಸತಿ ನಿಲಯದಲ್ಲಿ ನಿತ್ಯದ ತರಕಾರಿ ಇಡಲು ಫ್ರಿಜ್​ ಇಲ್ಲದೆ ಕೊಳೆಯುವಂತಾಗಿತ್ತು. ನಿಲಯದ ಸುತ್ತ ಕಸ ಸ್ವಚ್ಛತೆ ಮಾಡುತ್ತಿಲ್ಲ ಎಂದು ದೂರಿದ್ದರು. ಸಮಸ್ಯೆಗಳನ್ನು ಒಂದು ದಿನದಲ್ಲಿ ಪರಿಹರಿಸುವಂತೆ ಫಣೀಂದ್ರ ಸೂಚಿಸಿದ್ದರು. ಅದರಂತೆ ಸಮಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ. ಶುಭಾ ಅವರು ಸ್ವಚ್ಛತೆಗೆ ಕ್ರಮ ವಹಿಸಿದ್ದಲ್ಲದೆ, ಹೊಸ ಫ್ರಿಜ್​ ಸಹ ಖರೀದಿ ಮಾಡಿದ್ದಾರೆ.

ಬಾಲಕ ವಸತಿ ನಿಲಯದಲ್ಲಿ ಊಟದ ತಟ್ಟೆ ಹಾಗೂ ಲೋಟಗಳು ಸಮರ್ಪಕವಾಗಿಲ್ಲ. ಮೇಲಂತಸ್ತಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂದು ಅಹವಾಲು ಸಲ್ಲಿಸಿದ್ದರು. ಒಂದೇ ದಿನದಲ್ಲಿ ವ್ಯವಸ್ಥೆ ಮಾಡಲು ಸೂಚಿಸಿದ್ದರು. ಹೀಗಾಗಿ ಅಧಿಕಾರಿಗಳು ಪ್ರತಿ ವಿದ್ಯಾರ್ಥಿಗೆ ಹೊಸ ತಟ್ಟೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ.