ಜಿಲ್ಲೆ

ಇದ್ದೂ ಇಲ್ಲದಂತಾದ ಅಧಿಕಾರಿ ಸಿಬ್ಬಂದಿ

ಕೋಲಾರ ಡೆಸ್ಕ್

ಕಿರುವಾರ ಎಸ್​. ಸುದರ್ಶನ್​ ಕೋಲಾರ

ಜಿಲ್ಲೆಯಲ್ಲಿನ ಸಾರಿಗೆ ಕಚೇರಿಗಳಲ್ಲಿ ಅಧಿಕಾರಿ, ಸಿಬ್ಬಂದಿ ಯಾರು ಎಂದು ಗುರುತಿಸುವುದೇ ದೊಡ್ಡ ಸವಾಲಾಗಿದೆ. ಹೌದು. ಕೋಲಾರ ಆರ್​ಟಿಒ ಮತ್ತು ಕೆಜಿಎ್​ ಎಆರ್​ಟಿಒ ಕಚೇರಿಯಲ್ಲಿ ಅಧಿಕಾರಿ, ಸಿಬ್ಬಂದಿ ಅಧಿಕಾರಕ್ಕಿಂತ ಮಧ್ಯವರ್ತಿಗಳ ದರ್ಬಾರ್​ ಜೋರಾಗಿದ್ದು, ಅಧಿಕಾರಿ, ಸಿಬ್ಬಂದಿ ಆಟಕ್ಕುಂಟು. ಲೆಕ್ಕಕ್ಕಿಲ್ಲ ಎಂಬತಾಗಿದೆ.

ಸಾರ್ವಜನಿಕರು ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ಕೋಲಾರ ಆರ್​ಟಿಒ ಹಾಗೂ ಕೆಜಿಎ್​ನ ಎಆರ್​ಟಿಒ ಕಚೇರಿಯಲ್ಲಿ ಸಮರ್ಪಕ ವ್ಯವಸ್ಥೆಯಿಲ್ಲ. ಇಲ್ಲಿ ಎಲ್ಲವೂ ಮಧ್ಯವರ್ತಿಗಳಿಂದಲೇ ನಡೆಯುತ್ತಿದೆ. ಸೌಲಭ್ಯ ಕೋರಿ ಯಾರಾದರೂ ಅರ್ಜಿ ಸಲ್ಲಿಸಿದರೆ ವರ್ಷ ಕಳೆದರೂ ಸೇವೆ ದೊರೆಯುವುದಿಲ್ಲ. ಇಲಾಖೆಯ ನಿಯಮಗಳು ಯಾವುದೂ ಪಾಲನೆ ಆಗುವುದಿಲ್ಲ. ಇಲ್ಲಿ ವಾಹನ ಚಾಲನಾ ತರಬೇತಿ ಕೇಂದ್ರ, ಡೆವಿಂಗ್​ ಶಾಲೆಗಳ ಮಾಲೀಕರು ಹೇಳಿದ ಹಾಗೆ ನಡೆಯುತ್ತದೆ ಎಂಬುದು ಸಾರ್ವಜನಿಕರ ಆರೋಪ.

ಡೆವಿಂಗ್​ ಬರದಿದ್ದರೂ ಪರವಾನಗಿ: ಹೊಸದಾಗಿ ಚಾಲನಾ ಪರವಾನಗಿ ಪಡೆದುಕೊಳ್ಳಲು ಬರುವವರು ಕಡ್ಡಾಯವಾಗಿ ಟೆಸ್ಟ್​ ಡೆವ್​ ಮಾಡಬೇಕು. ಆದರೆ ಇಲ್ಲಿನ ಪದ್ಧತಿಯೇ ಬೇರೆ. ಪರವಾನಗಿ ಬೇಕಾಗಿರುವ ವ್ಯಕ್ತಿಯ ಪಕ್ಕದಲ್ಲಿ ತರಬೇತುದಾರ ಕುಳಿತುಕೊಳ್ಳುತ್ತಾನೆ, ಆತ ಚಾಲನೆ ಮಾಡುತ್ತಿರುತ್ತಾನೆ. ಆದರೆ ಚಾಲಕ ಮಾತ್ರ ಸುಮ್ಮನೆ ಸ್ಟೇರಿಂಗ್​ ಹಿಡಿದುಕೊಂಡಿರಬೇಕು. ಒಂದು ವೇಳೆ ಡಿಎಲ್​ ಪಡೆದುಕೊಳ್ಳುವವನಿಗೆ ವಾಹನ ಚಾಲನೆ ಮಾಡುವುದು ಬಾರದಿದ್ದರೂ ಅಧಿಕಾರಿಗಳು ಲೈಸನ್ಸ್​ ವಿತರಣೆ ಮಾಡುತ್ತಾರೆ. ಇದೆಲ್ಲ ಆಗುವುದು ವಾಹನ ಚಾಲನ ತರಬೇತಿದಾರರನ ಮಧ್ಯಸ್ಥಿಕೆಯಲ್ಲಿ. ಇದಕ್ಕೆ ಬ್ರೇಕ್​ ಇನ್​ಪೆಕ್ಟರ್​ ಬೆಂಬಲವೂ ಇದೆ ಎನ್ನಲಾಗಿದೆ.

ಪರಿಶೀಲಿಸದೆ ಪರ್ಮಿಟ್​: ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ಲಾರಿ, ಟೆಂಪೋ, ಇತರ ವಾಹನಗಳು ಹೆಚ್ಚಾಗಿ ಸಂಚರಿಸುತ್ತವೆ. ಅವುಗಳಿಗೆ ಪರ್ಮಿಟ್​ ನೀಡಬೇಕಾದರೆ ಸಾವಿರಾರು ರೂ. ಪಾವತಿ ಮಾಡಬೇಕು. ಇಲ್ಲದಿದ್ದರೆ ಪರ್ಮಿಟ್​ ಸಿಗುವುದಿಲ್ಲ. ಇದೆಲ್ಲವನ್ನು ನೋಡಿಕೊಳ್ಳಲು ಅಧಿಕಾರಿಗಳೇ ಖಾಸಗಿ ದಲ್ಲಾಳಿಗಳನ್ನು ನೇಮಕ ಮಾಡಿಕೊಂಡಿದ್ದಾರೆ. ವಾಹನಗಳನ್ನು ಪರಿಶೀಲನೆಗೆ ಒಳಪಡಿಸಿ ವಾಹನದ ತೂಕ, ಇಂಜಿನ್​ ಕಾರ್ಯ ವಿಧಾನ, ವಿಮೆ, ಎ್​ಸಿ ಕಾಲಾವಧಿ ಇತ್ಯಾದಿ ಅಂಶ ವರದಿ ಮಾಡಬೇಕು. ಆದರೆ, ಇದ್ಯಾವುದನ್ನು ಗಮನಿಸದೆ ಮಧ್ಯವರ್ತಿಗಳ ಮಾಹಿತಿ ಮೇರೆಗೆ ಪ್ರಮಾಣ ಪತ್ರ ನೀಡಲಾಗುತ್ತದೆ, ಪರ್ಮಿಟ್​ಗೆ ಅನುಮತಿ ಕೊಡಲಾಗುತ್ತಿದೆ.

ಮಧ್ಯವರ್ತಿಗಳ ಕೈಯಲ್ಲಿ ತಂತ್ರಾಂಶ: ಆರ್​ಟಿಒ ಇಲಾಖೆ ಸಾರ್ವಜನಿಕ ಸೇವೆಯನ್ನು ಸರಳವಾಗಿಸುವ ನಿಟ್ಟಿನಲ್ಲಿ ಹಾಗೂ ಮಧ್ಯವರ್ತಿಗಳ ಹಾವಳಿ ತಡೆಗೆ ಸಾರಥಿ, ವಾಹನ್​ ಎಂಬ ತಂತ್ರಾಂಶ ಅಭಿವೃದ್ಧಿ ಪಡಿಸಿದೆ. ಈ ಮೂಲಕ ಸಾರ್ವಜನಿಕರು ನೇರವಾಗಿ ಆನ್​ಲೈನ್​ನಲ್ಲೇ ಅರ್ಜಿ ಸಲ್ಲಿಸಿ, ಎಲ್​ಎಲ್​ಆರ್​, ಡಿಎಲ್​ ಮತ್ತಿತರ ಸೇವೆ ಪಡೆಯಬಹುದಾಗಿದೆ. ಆದರೆ, ಇಲ್ಲಿ ಎಲ್ಲವೂ ಮಧ್ಯವರ್ತಿಗಳ ಹಿಡಿತದಲ್ಲಿದ್ದು, ಕಚೇರಿಯಲ್ಲಿ ಮಧ್ಯವರ್ತಿಗಳನ್ನು ಸಂಪರ್ಕಿಸಿಯೇ ಅರ್ಜಿ ಸಲ್ಲಿಸಬೇಕು. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ಇದ್ದರೂ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸಂಬಂಧವಿಲ್ಲದವರಿಗೆ ಪ್ರಾಶಸ: ಕೋಲಾರ ಆರ್​ಟಿಒ ಕಚೇರಿಯಲ್ಲಿ ಸಂಬಂಧವಿಲ್ಲದ ವ್ಯಕ್ತಿಗಳಿಗೆ ಅಧಿಕಾರಿ ವರ್ಗ ಪ್ರಾಶಸ ನೀಡುತ್ತಿದೆ. ಕಚೇರಿಯಲ್ಲಿ ಮಂಜುನಾಥ್​ ಎಂಬವರು ಅಧಿಕಾರಿಯೂ ಅಲ್ಲ. ಸಿಬ್ಬಂದಿಯೂ ಅಲ್ಲ. ಗುತ್ತಿಗೆ ಸಿಬ್ಬಂದಿಯೂ ಅಲ್ಲ. ಆದರೂ ಈ ವ್ಯಕ್ತಿ ಆರ್​ಟಿಒ, ಇನ್​ಸ್ಪೆಕ್ಟರ್​ ಸುತ್ತಮುತ್ತ ಓಡಾಡಿಕೊಂಡೇ ಇರುತ್ತಾನೆ. ಆರ್​ಟಿಒ ಅಧಿಕಾರಿ ಹೇಳಿದರೂ ಆಗದ ಕೆಲಸಗಳು ಮಂಜುನಾಥ್​ ಹೇಳಿದರೆ ಸುಲಭವಾಗುತ್ತವೆ. ಇಲಾಖೆಗೆ ಸಂಬಂಧವಿಲ್ಲದ ಖಾಸಗಿ ವ್ಯಕ್ತಿಗೆ ಅಧಿಕಾರಿಗಳು ಪ್ರಾಶಸ ನೀಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.