ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ನಗರದಲ್ಲಿ ಜೂ. 16ರಂದು ಆಯೋಜಿಸಿರುವ ಧಾರವಾಡ ತಾಲೂಕು 8ನೇ ಸಮ್ಮೇಳನದ ಸರ್ವಾಧ್ಯಕ್ಷರಿಗೆ ಬುಧವಾರ ಅಧಿಕೃತ ಆಮಂತ್ರಣ ನೀಡಿ ಗೌರವಿಸಲಾಯಿತು.
ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾದ ಕವಿ ಕೆ.ಎಚ್. ನಾಯಕ ಅವರ ನಿವಾಸಕ್ಕೆ ತೆರಳಿದ ಪರಿಷತ್ ಪದಾಧಿಕಾರಿಗಳು, ಅಧಿಕೃತ ಆಮಂತ್ರಣ ನೀಡಿ ನಾಯಕ ದಂಪತಿಗೆ ಸನ್ಮಾನಿಸಿದರು. ಕಚುಸಾಪ ಕೇಂದ್ರ ಸಮಿತಿ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಜಿಲ್ಲಾಧ್ಯಕ್ಷ ಶಂಕರ ಕುಂಬಿ, ಪ್ರಸಾರ0ಗ ನಿರ್ದೇಶಕ ಚನ್ನಬಸಪ್ಪ ಧಾರವಾಡಶೆಟ್ರು, ತಾಲೂಕು ಅಧ್ಯಕ್ಷೆ ಜಯಶ್ರೀ ಪಾಟೀಲ, ಡಾ. ವಿಲಾಸರಾವ್, ಇತರರು ಇದ್ದರು.