ಜಿಲ್ಲೆ

ಕೂಸಿನ ಮನೆಗೆ ಯುನಿಸ್ೆ ತಂಡ ಭೇಟಿ

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಹೊಸಕೋಟೆ ತಾಲೂಕು ಬೈಲನರಸಪುರ ಗ್ರಾಮ ಪಂಚಾಯಿತಿಗೆ ಬುಧವಾರ ಭೇಟಿ ನೀಡಿದ ಯುನಿಸ್ೆ ಸಂಸ್ಥೆಯ ಮುಖ್ಯಸ್ಥೆ ರಿನಿ ಕುರಿನ್ ಹಾಗೂ ಪರಿಣಿತರ ತಂಡ ಇಲ್ಲಿನ ಕೂಸಿನ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಕೂಸಿನ ಮನೆ’ ಕಾರ್ಯಕ್ರಮದ ಪರಿಣಾಮಗಳ ಕುರಿತು ಅಧ್ಯಯನ ಮಾಡಲು ತಂಡ ಅಗಮಿಸಿದ್ದು, ಇಲ್ಲಿನ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಉತ್ತಮ ನಿರ್ವಹಣೆ ಮಾಡುತ್ತಿರುವ ಪಂಚಾಯಿತಿ ಕಾರ್ಯಕ್ಕೆ ಯುನಿಸ್ೆ ಮುಖ್ಯಸ್ಥೆ ರಿನಿ ಕುರಿನ್ ಮೆಚ್ಚುಗೆ ವ್ಯಕ್ತಪಡಿಸಿದರು. ನರೇಗಾ ಕೆಲಸಕ್ಕೆ ಹೋಗುವ ಕೂಲಿಕಾರ್ಮಿಕರ ಮಕ್ಕಳಿಗಾಗಿ ವಿಶೆಷವಾಗಿ ಗ್ರಾಮ ಪಂಚಾಯತಿಗೆ ಒಂದರಂತೆ ತೆರೆದಿರುವ ಕೂಸಿನ ಮನೆ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಮತ್ತು ಅದರಿಂದ ಮಕ್ಕಳಿಗೆ ಸಿಗುತ್ತಿರುವ ಸೌಲಭ್ಯವೇನು, ಇದರ ಸಾಧಕ, ಬಾಧಕಗಳೇನು ಎಂಬುದರ ಬಗ್ಗೆ ಅಧಿಕಾರಿಗಳಿಂದ ಹಾಗೂ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಲಾಯಿತು.

ಇಲಾಖೆ ವ್ಯಾಪ್ತಿಗೆ ತರಬೇಕು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಶಿಶುಪಾಲನಾ ಕೇಂದ್ರಗಳಂತೆ ಕೂಸಿನ ಮನೆಯನ್ನು ಇಲಾಖೆ ವ್ಯಾಪ್ತಿಗೆ ತರಬೇಕು, ಶಿಕ್ಷಕಿಯರೂ ಸೇರಿ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು, ಹೆಚ್ಚು ಆದಾಯ ತರುವ ಪಂಚಾಯಿತಿಗಳಿಗೆ ಇವುಗಳ ಜವಾಬ್ದಾರಿ ವಹಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದರು. ನರೇಗಾ ಯೋಜನೆಯಡಿ 100 ದಿನಗಳ ಕೂಲಿಯಂತೆ ನಿಗಧಿಪಡಿಸಿರುವುದನ್ನು ವಿಸ್ತರಣೆ ಮಾಡಿದರೆ ಗ್ರಾಮೀಣ ಭಾಗದ ಮಹಿಳಾ ಕೂಲಿಕಾರ್ಮಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು. ಈ ಬಗ್ಗೆ ಸ್ಥಳೀಯರಿಂದ ಹಾಗೂ ಮಹಿಳಾ ಕೂಲಿಕಾರ್ಮಿಕರಿಂದ ಅಭಿಪ್ರಾಯ ಸಂಗ್ರಹಿಸಿ ಈ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿ ಅಧಿಕಾರಿಗಳು ತಿಳಿಸಿದರು. ಜಿಲ್ಲೆಯಲ್ಲಿ ಹಲವು ಕಡೆಗಳಲ್ಲಿ ಕೂಸಿನ ಮನೆ ಕಾರ್ಯನಿರ್ವಹಿಸುತ್ತಿದ್ದು, ಮಹಿಳಾ ಕೂಲಿಕಾರ್ಮಿಕರ ಮಕ್ಕಳಿಗೆ ಆಸರೆಯಾಗಿದೆ. ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ಉತ್ತಮ ರೀತಿ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮುದ್ದಣ್ಣ ತಿಳಿಸಿದರು.

ಮಕ್ಕಳೊಂದಿಗೆ ಚರ್ಚೆ: ಇದೇ ವೇಳೆ ಯುನಿಸ್ೆ ಮುಖ್ಯಸ್ಥೆ ಹಾಗೂ ತಂಡದ ಅಧಿಕಾರಿಗಳು ಕೂಸಿನ ಮನೆಯಲ್ಲಿನ ಮಹಿಳೆಯರು ಹಾಗೂ ಮಕ್ಕಳೊಂದಿಗೆ ಕೆಲಹೊತ್ತು ಮಾತುಕತೆ ನಡೆಸಿದರು. ಮಕ್ಕಳ ಪೌಷ್ಟಿಕತೆ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು. ಮಕ್ಕಳೊಂದಿಗೆ ಸಮಾಲೋಚನೆ:

ಯುನಿಸ್ೆ ತಂಡದ ಕೂಸಿನ ಮನೆ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಗ್ರಾಮ ಪಂಚಾಯತಿ ಅಧಿಕಾರಿಗಳು ಮತ್ತು ಸಿಬ್ಬಂದಿ, ಮಕ್ಕಳ ಪಾಲಕರು, ಗ್ರಾಮ ಪಂಚಾಯತಿ ಮಟ್ಟದ ಕೂಸಿನ ಮನೆ ಮೇಲ್ವಿಚಾರಣಾ ಸಮಿತಿಯವರು, ಕೂಸಿನಮನೆ ಕೇರ್‌ಟೇಕರ್‌ಗಳು, ಗ್ರಾಮ ಪಂಚಾಯತಿ ಮತ್ತು ನರೇಗಾ ಅಧಿಕಾರಿಗಳು ಕೂಸಿನ ಮನೆ ಸೌಲಭ್ಯ ಪಡೆಯುತ್ತಿರುವ ಮಕ್ಕಳ ಪಾಲಕರೊಂದಿಗೆ ಸಮಾಲೋಚನೆ ನಡೆಸಿದರು.