ರಾಯಚೂರಿನ ಕನ್ನಡ ಭವನದಲ್ಲಿ ಜಿಲ್ಲಾಡಳಿತದಿಂದ ಶನಿವಾರ ಹಮ್ಮಿಕೊಂಡಿದ್ದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮಕ್ಕೆ ಜನಪ್ರತಿನಿಗಳು, ಅಕಾರಿಗಳು ಗೈರು ಹಾಜರಾಗಿರುವುದನ್ನು ಖಂಡಿಸಿ ದಲಿತಪರ ಸಂಘಟನೆ ಮುಖಂಡರಿಂದ ವೇದಿಕೆ ಮುಂಭಾಗದಲ್ಲಿ ಕುಳಿತು ಪ್ರತಿಭಟನೆ ನಡೆಸಲಾಯಿತು. ಮುಖಂಡರಾದ ಮಲ್ಲೇಶ ಕೊಲಮಿ, ವಿಶ್ವನಾಥ ಪಟ್ಟಿ, ಕೆ.ಇ.ಕುಮಾರ, ಹನುಮಂತಪ್ಪ ಇದ್ದರು. 
ಜಿಲ್ಲೆ

ಗೈರು ಹಾಜರಿಗೆ ಆಕ್ರೋಶ

ರಾಚಯ್ಯ ಸ್ವಾಮಿ

ರಾಯಚೂರು: ಜಿಲ್ಲಾಡಳಿತದಿಂದ ನಗರದ ಕನ್ನಡಭವನದಲ್ಲಿ ಹಮ್ಮಿಕೊಂಡಿದ್ದ ಒನಕೆ ಓಬವ್ವ ಜಯಂತಿಗೆ ಜನಪ್ರತಿನಿಗಳು ಮತ್ತು ಅಕಾರಿಗಳು ಗೈರು ಹಾಜರಾಗಿರುವುದನ್ನು ಖಂಡಿಸಿ ದಲಿತ ಪರ ಸಂಘಟನೆಗಳ ಮುಖಂಡರು ವೇದಿಕೆ ಮುಂಭಾಗದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
ಕಾಟಾಚಾರಕ್ಕೆ ಜಯಂತಿ ನಡೆಸಲಾಗುತ್ತಿದ್ದು, ಅಕಾರಿಗಳು ಪಾಲ್ಗೊಳ್ಳದೆ ನಿರ್ಲಕ್ಷ ವಹಿಸಿದ್ದಾರೆ ಎಂದು ಕ್ಕಾರ ಕೂಗಿದರು. ನಂತರ ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶ ಆಗಮಿಸಿದಾಗ ಮುಖಂಡರು ತರಾಟೆಗೆ ತೆಗೆದುಕೊಂಡರು. ನಂತರ ಪ್ರತಿಭಟನಾಕಾರರ ಮನವೊಲಿಸಿ ಕಾರ್ಯಕ್ರಮವನ್ನು ನಡೆಸಲಾಯಿತು.
ದಲಿತ ಮುಖಂಡರಾದ ಮಲ್ಲೇಶ ಕೊಲಮಿ, ವಿಶ್ವನಾಥ ಪಟ್ಟಿ, ಕೆ.ಇ.ಕುಮಾರ, ಹನುಮಂತಪ್ಪ ಸೇರಿದಂತೆ ದಲಿತಪರ ಸಂಘಟನೆಗಳು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.