ಜಿಲ್ಲೆ

ಕೃಷ್ಣಾ ತೀರಕ್ಕೆ ಅಧಿಕಾರಿ ಭೇಟಿ ನೀಡಿ ಪರಿಶೀಲನ

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದ ಬಳಿ ಕೃಷ್ಣಾ ನದಿಗೆ ಜಮಖಂಡಿ ತಾಲೂಕಿನ ಸಕ್ಕರೆ ಕಾರ್ಖಾನೆ ತ್ಯಾಜ್ಯ ನೀರು ಸೇರಿ ಮೀನುಗಳು ಸಾಯುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಅಥಣಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಅಲ್ಲಿ-ನ ಸ್ಥಿತಿಗತಿ ಪರಿಶೀಲಿಸಿ, ನೀರಿನ ಗುಣಮಟ್ಟ ತಪಾಸಣೆಗಾಗಿ ಪರೀಕ್ಷಾ  ಕೇಂದ್ರಕ್ಕೆ ರವಾನಿಸಿದರು.

ಈ ಕುರಿತು ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿಯಲ್ಲಿ ಸೋಮ-ವಾ-ರ "ಕೃಷ್ಣೆಯ-ಲ್ಲಿ ಮತ್ಸಗಳ ಮರಣ ಮೃದಂಗ!-' ಎಂಬ ವರದಿ ಪ್ರಕಟಗೊಂಡಿತ್ತು. ವರದಿಗೆ ಎಚ್ಚೆತ್ತ ಅಧಿಕಾರಿಗಳು ನದಿ ತೀರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ರವೀಂದ್ರ ಮುರಗಾಲಿ ಮಾತನಾಡಿ, ಶಿರಹಟ್ಟಿ ಗ್ರಾಮದ ಕೃಷ್ಣಾ ನದಿ ನೀರಿನಲ್ಲಿ ಮತ್ತು ದಡದಲ್ಲಿ ಸಹಸ್ರಾರು ಮೀನುಗಳ ಮಾರಣ ಹೋಮವಾಗಿವೆ. ಇವುಗಳ ಸ್ವಚ್ಛತೆಗಾಗಿ ಗ್ರಾಪಂನವರಿಗೆ ಸ್ಥಳಕ್ಕೆ ಬರಲು ಹೇಳಿ-ದ-ರೂ ಯಾರೋಬ್ಬರು ಬಂದಿ-ಲ್ಲ. ಈ ಕುರಿ-ತು ಮೇಲಧಿಕಾರಿಗೆ ಮಾಹಿತಿ ನೀಡಲಾಗುವುದು. ನದಿ ನೀರಿನ ಗುಣಮಟ್ಟ ಪರೀಕ್ಷೆಗಾಗಿ ತೆಗೆದುಕೊಳ್ಳಲಾಗಿದೆ. ವರದಿ ನೋಡಿ-ಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು. ನದಿ ನೀರಿ-ಗೆ ಕಾರ್ಖಾನೆ ತ್ಯಾಜ್ಯ ಜತೆ-ಗೆ ಕೊಳಚೆ ನೀರು ಸೇರುತ್ತಿದೆ. ಇದನ್ನು ತಡೆಯುವಂತೆ ತಹಸೀಲ್ದಾರ್​-, ತಾಪಂ ಇಒ ಹಾಗೂ ಪೊಲೀಸ್​ ಇಲಾಖೆ ಸೇರಿ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇ ಬಸವರಾಜ ಪಾಟೀಲ, ಸಿಬ್ಬಂದಿ ಕಲ್ಲಪ್ಪ ಗುರವ, ಸುರೇಶ ಪೂಜಾರಿ ಇತರರಿದ್ದರು.