ಜಿಲ್ಲೆ

ಬಗರ್‌ಹುಕುಂ ಆಪ್ ವಿರುದ್ಧ ಆಕ್ರೋಶ - ಕಂದಾಯ ಇಲಾಖೆ ಸಭೆಯಲ್ಲಿ ಧಿಕ್ಕಾರ ಕೂಗಿದ ಅಧಿಕಾರಿ

Mangaluru - Nishantha Narayana

ಪುತ್ತೂರು: ಮಿನಿ ವಿಧಾನಸೌಧದಲ್ಲಿ ನಡೆದ ಕಂದಾಯ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಅಽಕಾರಿಯೊಬ್ಬರು ಬಗರ್ ಹುಕುಂ ಮೊಬೈಲ್ ಆಪ್ ವಿರುದ್ಧ ಧಿಕ್ಕಾರ ಕೂಗಿದ ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.

ಭೂಮಿ ಸಮಾಲೋಚಕರಿಂದ ಗ್ರಾಮ ಆಡಳಿತ ಅಧಿಕಾರಿಗಳಿಗೆ ತರಬೇತಿ ನೀಡಲು ಇತ್ತೀಚೆಗೆ ಸಭೆಯೊಂದು ನಡೆಸಲಾಗಿದ್ದು, ಸರ್ಕಾರಿ ಅಧಿಕಾರಿಯೊಬ್ಬರು ತಹಸೀಲ್ದಾರ್, ಕಂದಾಯ ನೀರಿಕ್ಷಕರು ಹಾಗೂ ಇತರ ಅಧಿಕಾರಿಗಳ ಎದುರೇ ಧಿಕ್ಕಾರ ಕೂಗಿದ್ದಾರೆ. ಈ ವಿಚಾರ ಸಭೆಯಲ್ಲಿ ಅಽಕಾರಿಗಳಿಂದಲೇ ಈಗ ಬಹಿರಂಗವಾಗಿದೆ.

ಭ್ರಷ್ಟಾಚಾರ ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ತಂದಿರುವ ಮೊಬೈಲ್ ಆಪ್ ವಿರುದ್ಧ ಮಾತನಾಡಿದರೂ, ಹಿರಿಯ ಅಽಕಾರಿಗಳು ಯಾವುದೇ ಪ್ರತಿಕ್ರಿಯೆ ತೋರದೆ ಮೌನಕ್ಕೆ ಶರಣಾಗಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಕಂದಾಯ ಸಚಿವ ಕೃಷ್ಣ ಭೈರೇಗೌಡರ ವಿಶಿಷ್ಠ ಪರಿಕಲ್ಪನೆಯ ಬಗರ್ ಹುಕುಂ (ಅಕ್ರಮ ಸಕ್ರಮ) ಆಪ್ ನ ಮೂಲಕ ಪುತ್ತೂರು ಭಾಗದಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಕಡತಗಳು ವಿಲೇವಾರಿಯಾಗಿದೆ. ಗ್ರಾಮ ಮಟ್ಟದಲ್ಲಿ ಬೈಟಕ್ ನಡೆಸುವ ಮೂಲಕ ಭೂಮಿ ಹಂಚಿಕೆ ಪ್ರಕ್ರಿಯೆಯನ್ನು ಶಾಸಕರು ನಡೆಸಿಕೊಂಡು ಬರುತ್ತಿದ್ದಾರೆ.

ಸರ್ಕಾರದ ಶಾಸಕರು ಇರುವ ಕ್ಷೇತ್ರದಲ್ಲೇ ಸರ್ಕಾರದ ಯೋಜನೆಯ ವಿರುದ್ಧ ಧಿಕ್ಕಾರ ಕೂಗಿರುವುದು ಎಲ್ಲರನ್ನು ಅಚ್ಚರಿ ಮೂಡಿಸುವಂತೆ ಮಾಡಿದೆ. ಧಿಕ್ಕಾರ ಕೂಗಿದ ಗ್ರಾಮ ಆಡಳಿತ ಅಧಿಕಾರಿ ವಿರುದ್ಧ ಭ್ರಷ್ಟಾಚಾರದ ದೂರು ಕೇಳಿ ಬಂದ ಹಿನ್ನಲೆಯಲ್ಲಿ ವಾರದ ಹಿಂದೆ ಶಾಸಕರು ತರಾಟೆಗೆತ್ತಿಕೊಂಡಿದ್ದರೆಂದು ಶಕ್ತಿ ಸೌಧದ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.