ರಾಣೆಬೆನ್ನೂರ: ತಾಲೂಕಿನ ಕೋಣನತಂಬಗಿ ಗ್ರಾಮದ ತುಂಗಭದ್ರಾ ನದಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ದಾಸ್ತಾನು ಮಾಡಿದ 90 ಮೆಟ್ರಿಕ್ ಟನ್ ಮರಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ನೇತೃತ್ವದ ಅಧಿಕಾರಿಗಳ ತಂಡ ಬುಧವಾರ ರಾತ್ರಿ ದಾಳಿ ನಡೆಸಿ ವಶಪಡಿಸಿಕೊಂಡಿದೆ.
ಅನಧಿಕೃತವಾಗಿ ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆ ಮಾಡುತ್ತಿರುವ ದೂರಿನ ಹಿನ್ನೆಲೆಯಲ್ಲಿ ಹಿರಿಯ ಭೂವಿಜ್ಞಾನಿ ಪುಷ್ಪಾವತಿ ಕೆ.ಎನ್., ಭೂವಿಜ್ಞಾನಿಗಳಾದ ಶ್ರೀನಿವಾಸ, ನಾಗರಾಜು ಈ., ಲೋಕೋಪಯೋಗಿ ಇಲಾಖೆಯ ಸದಾನಂದ, ಚೇತನ, ಗ್ರಾಮಲೆಕ್ಕಾಧಿಕಾರಿ ಅಕ್ಷತಾ, ಪೊಲೀಸ್ ಸಿಬ್ಬಂದಿ ವಸಂತ ಹಾಗೂ ಲಿಂಗರಾಜ ಅವರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಅನಧಿಕೃತವಾಗಿ ದಾಸ್ತಾನು ಮಾಡಲಾದ ಮರಳನ್ನು ವಶಪಡಿಸಿಕೊಂಡಿದ್ದಾರೆ.