ಮೂಡಲಗಿ ಪಟ್ಟಣದ ತಹಸೀಲ್ದಾರ್ ಮಹಾದೇವ ಸನ್ನಮುರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ರಮೇಶ ಸಣ್ಣಕ್ಕಿ, ಶಾಬು ಸಣ್ಣಕ್ಕಿ, ಅಶೋಕ ಸಿದ್ದಲಿಂಗಪ್ಪಗೋಳ, ಸುರೇಶ ಸಣ್ಣಕ್ಕಿ ಇತರರು ಇದ್ದರು. 
ಜಿಲ್ಲೆ

ಅಧಿಕಾರಿ ಮೇಲೆ ಕಠಿಣ ಕ್ರಮವಾಗಲಿ

ಪ್ರಶಾಂತ ಹೂಗಾರ

ಮೂಡಲಗಿ: ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅವರು ಕ್ಷೇತ್ರದ ಕಾಮಗಾರಿ ಕುರಿತು ಮಾಹಿತಿ ಕೇಳುವುದಕ್ಕೆ ಗೋಕಾಕ ಸಹಾಯಕ ಅರಣ್ಯ ಇಲಾಖೆಯ ಅಧಿಕಾರಿ ಶಿವಾನಂದ ನಾಯಕವಾಡಿಗೆ ದೂರವಾಣಿ ಮೂಲಕ ಕರೆ ಮಾಡಿದ ವೇಳೆ ಕುಡಿದ ಮತ್ತಿನಲ್ಲಿ ಶಾಸಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಅಧಿಕಾರಿ ಮೇಲೆ ಕ್ರಮಕ್ಕೆ ಆಗ್ರಹಿಸಿ ತಾಲೂಕಿನ ದಲಿತ ಮುಖಂಡರು ಬುಧವಾರ ಪಟ್ಟಣದ ಕಲ್ಮೇಶ್ವರ ವತ್ತದಲ್ಲಿ ಪ್ರತಿಭಟಿಸಿದರು.

ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಮಹಾದೇವ ಸನ್ನಮುರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ದಲಿತ ಮುಖಂಡರಾದ ರಮೇಶ ಸಣ್ಣಕ್ಕಿ, ಶಾಬು ಸಣ್ಣಕ್ಕಿ, ಅಶೋಕ ಸಿದ್ದಲಿಂಗಪ್ಪಗೋಳ, ಸುರೇಶ ಸಣ್ಣಕ್ಕಿ, ಮಹಾದೇವ ಮಸಣ್ಣವರ, ಯಶವಂತ ಮಂಟೂರ, ಲಕ್ಕಪ್ಪ ತೆಳಗಡೆ, ಮಾರುತಿ ಸರ್ವೆ, ಯಾಕೋಬ್ ಸಣ್ಣಕ್ಕಿ, ಹನುಮಂತ ಹವಳೆವಗೋಳ, ರಮೇಶ ಶಿಡ್ಲಗೋಳ, ವಿಲ್ಸನ್ ಢವಳೇಶ್ವರ ಇತರರಿದ್ದರು.