ಮಾನ್ವಿ: ಪಟ್ಟಣದಲ್ಲಿ ಜೂ.11 ರಂದು ಮಳೆ-ಗಾಳಿಗೆ ಶೆಡ್ ಬಿದ್ದಿದ್ದರಿಂದ ಮೃತಪಟ್ಟಿದ್ದ ಯಲ್ಲಪ್ಪ ಮಾಲ್ಕಿ (60) ಮನೆಗೆ ಶಾಸಕ ಹಂಪಯ್ಯ ನಾಯಕ ಭೇಟಿ ನೀಡಿ, ಸಾಂತ್ವನ ತಿಳಿಸಿದರು. ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಜೂ.17 ರಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಪಟ್ಟಣಕ್ಕೆ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪರಿಹಾರದ ಚೆಕ್ ವಿತರಣೆಗೆ ಕ್ರಮಕೈಗೊಳ್ಳಿ ಎಂದು ತಹಸೀಲ್ದಾರ್ ಎಲ್.ಡಿ ಚಂದ್ರಕಾಂತ್‌ಗೆ ಶಾಸಕ ಹಂಪಯ್ಯ ನಾಯಕ ಸೂಚಿಸಿದರು.
ಮಳೆ ಅವಘಡದಿಂದ ಮೃತಪಟ್ಟ ವ್ಯಕ್ತಿಯ ಬಗ್ಗೆ ತಾಲೂಕು ಆಡಳಿತದ ಗಮನಕ್ಕೆ ಇಲ್ಲದಿದ್ದರೆ ಹೇಗೆ ಎಂದು ತಹಸೀಲ್ದಾರರನ್ನು ಶಾಸಕ ಹಂಪಯ್ಯ ನಾಯಕ ತರಾಟೆಗೆ ತೆಗೆದುಕೊಂಡರು. ಕ್ಷೇತ್ರದಲ್ಲಿ ಏನು ನಡೆಯುತ್ತಿದೆ ಎನ್ನುವುದರ ಬಗ್ಗೆ ನನಗೆ ತಿಳಿಸಿಲ್ಲ.
ಇನ್ನು ಮುಂದೆ ಗಾಳಿ, ಮಳೆಯ ಕುರಿತು ವರದಿ ಪಡೆಯಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷೃವಹಿಸುವಂತಿಲ್ಲ ಎಂದು ಗ್ರಾಮ ಲೆಕ್ಕಾಧಿಕಾರಿ ಪ್ರಭಾಕರ್, ಉಪತಹಸೀಲ್ದಾರ್ ಚರಣ್ ಸಿಂಗ್ ರಾಠೋಡ್‌ಗೆ ತಾಕೀತು ಮಾಡಿದರು.