ಮಾನ್ವಿ: ತಾಪಂ ಇಒ ಖಾಲೀದ್ ಅಹಮ್ಮದ್ ಮತ್ತು ಕೆಲ ಪಿಡಿಒಗಳ ವಿರುದ್ಧ ದಾಖಲಿಸಿರುವ ಪ್ರಕರಣ ಹಿಂಪಡೆಯಬೇಕೆಂದು ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ ಸೋಮವಾರ ತಹಸೀಲ್ದಾರ್ ರಾಜು ಪಿರಂಗಿಗೆ ಮನವಿ ಸಲ್ಲಿಸಿತು.
ಇದನ್ನೂ ಓದಿ: ಬೆಟ್ಟಿಂಗ್ ಆ್ಯಪ್ ಪ್ರಕರಣ; ವಿಜಯ್ ದೇವರಕೊಂಡ ವಿರುದ್ಧ ಎಫ್ಐಆರ್.. ಈ ಕುರಿತು ನಟನ ತಂಡದಿಂದ ಸ್ಪಷ್ಟನೆ | Vijay Deverakonda
ಸಂಘದ ತಾಲೂಕು ಅಧ್ಯಕ್ಷ ಸುರೇಶ ಕುರ್ಡಿ ಮಾತನಾಡಿ, ತಾಪಂ ಕಚೇರಿಯಲ್ಲಿ ಇಒ ಹಾಗೂ ವಿವಿಧ ಪಿಡಿಒಗಳ ಕರ್ತವ್ಯದ ವೇಳೆ ಅಡ್ಡಿಪಡಿಸಿ ಗಲಾಟೆ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಂಘದಿಂದ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಗಿತ್ತು.
ನಂತರ ಆರೋಲಿ ಗ್ರಾಮಸ್ಥ ರಾಮಸ್ವಾಮಿ ಎನ್ನುವರು ವೈಯಕ್ತಿಕ ಕಾರಣದಿಂದ ಗ್ರಾಮದ ಕೆಲವರ ಹತ್ತಿರ ಜಗಳವಾಡಿಕೊಂಡು ಮಾನ್ವಿ ಠಾಣೆಯಲ್ಲಿ ತಾಪಂ ಇಒ ಖಾಲೀದ್, ಪಿಡಿಒ ನಾಗಭೂಷಣ ಮತ್ತು ಚೌಡಯ್ಯನಾಯಕ ವಿರುದ್ಧ ಸುಳ್ಳು ದೂರು ನೀಡಿದ್ದು, ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಹಂಪಣ್ಣ ಚಂಡೂರು, ಭಾಗಯ್ಯ ನಾಯಕ, ಮಲ್ಲಿಕಾರ್ಜುನ, ವೆಂಕಯ್ಯ ಶೆಟ್ಟಿ, ಹನುಮಂತರಾಯ ಕುಲಕರ್ಣಿ, ಹನುಮಂತಪ್ಪ ಜಲ್ಲಿ, ವಿರುಪಣ್ಣ, ಸತೀಶ್, ವೆಂಕಣ್ಣ ಯಾದವ್, ಸಂಜೀವಪ್ಪ, ಶ್ರೀಶೈಲ ಅಂಗಡಿ, ತಿಮ್ಮೇಶನಾಯಕ, ಸಂದೀಪ್, ಚಂದ್ರು ಹೂಗಾರ ಇತರರಿದ್ದರು.