ಸುಂಟಿಕೊಪ್ಪ: ಇಲ್ಲಿನ ವಾಹನ ಚಾಲಕರ ಸಂಘದ ಕಚೇರಿಯನ್ನು ಸಂಭ್ರಮ ಗ್ರೂಪ್ಸ್ ಹಾಗೂ ಎ.ಬಿ.ಗ್ರೂಪ್ಸ್ ಧನಸಹಾಯದ ಮೂಲಕ ಅಭಿವೃದ್ಧಿಗೊಳಿಸಲಾಗಿದೆ ಎಂದು ವಾಹನ ಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ ತಿಳಿಸಿದ್ದಾರೆ.
ಕಳೆದ ಹವು ವರ್ಷಗಳಿಂದ ವಾಹನ ಚಾಲಕರ ಸಂಘದ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದು, ಕಚೇರಿ ಒಳಭಾಗವು ಶಿಥಿಲಾವಸ್ಥೆಯಲ್ಲಿರುವುದನ್ನು ಮನಗಂಡ ಸಂಭ್ರಮ ಗ್ರೂಪ್ಸ್ ಹಾಗೂ ಎ.ಬಿ.ಗ್ರೂಪ್ಸ್‌ನ ಮಾಲೀಕರು ನೆಲಹಾಸು ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ. ಅದೇ ರೀತಿಯಲ್ಲಿ ಜಿ.ಪಂ. ಮಾಜಿ ಸದಸ್ಯ ಪಿ.ಎಂ.ಲತೀಫ್ ಅವರು ಸಿ.ಸಿ.ಕ್ಯಾಮರಾ ಅಳವಡಿಸುವ ಮೂಲಕ ಅಭಿವೃದ್ಧಿಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.