ಜಿಲ್ಲೆ

ಪದಾಧಿಕಾರಿಗಳ ಪದಗ್ರಹಣ ನಾಳೆ

ಎಂ.ಎಸ್​.ಹಿರೇಮಠ ಬೆಳಗಾವಿ

ರಾಮದುರ್ಗ: ಪಟ್ಟಣದ ಮರಾಠ ಕಲ್ಯಾಣ ಮಂಟಪದಲ್ಲಿ ಜು.5ರಂದು ಸಂಜೆ 7.30ಕ್ಕೆ ಲಯನ್ಸ್​ ಕ್ಲಬ್​ನ 53ನೇ ವರ್ಷದ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಲಯನ್ಸ್​ ಕ್ಲಬ್​ ಆಡಳಿತಾಧಿಕಾರಿ ವೆಂಕಟೇಶ ಹಿರೇರಡ್ಡಿ ತಿಳಿಸಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗೋವಾದ ಲಯನ್ಸ್​ ಸಂಸ್ಥೆ ಜಿಲ್ಲಾ ಸಂಚಾಲಕಿ ಜ್ಯೋತಿ ಕುಲಕರ್ಣಿ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಮಾಡುವರು. ಅತಿಥಿಗಳಾಗಿ ಶಾಸಕ ಅಶೋಕ ಪಟ್ಟಣ, ಸಾಹಿತಿ ಡಾ.ಗುರುದೇವಿ ಹುಲೆಪ್ಪನವರಮಠ ಉಪನ್ಯಾಸ ನೀಡುವರು ಎಂದರು.

ಲಯನ್ಸ್​ ಕ್ಲಬ್​ ನೂತನ ಅಧ್ಯರಾಗಿ ಸರಳಾ ಪತ್ತೇಪುರ, ಕಾರ್ಯದರ್ಶಿಯಾಗಿ ರಂಜನಾ ದಿಂಡಿವಾರ, ಖಜಾಂಜಿಯಾಗಿ ಡಾ.ವೈಶಾಲಿನಿ ಸಂಕನಗೌಡ್ರ, ಉಪಾಧ್ಯರಾಗಿ ವೀಣಾ ಹಿರೇರಡ್ಡಿ, ಸುನೀಲ ಹೊಂಗಲ ಅಧಿಕಾರ ಸ್ವೀಕರಿಸುವರು ಎಂದು ತಿಳಿಸಿದರು.

ಸಂಸ್ಥೆಯ ಅಧ್ಯ ಪಿ.ವಿ.ಕಂಬಾರ ಮಾತನಾಡಿ, ಕಳೆದ ವರ್ಷದ ಅವಧಿಯಲ್ಲಿ ನೇತ್ರ ತಪಾಸಣೆ ಸೇರಿ ಹಲವಾರು ಸಮಾಜಮುಖಿ ಕಾರ್ಯ ಹಮ್ಮಿಕೊಂಡಿದೆ. ಸಂಸ್ಥೆಗೆ ಜನರ ಸಹಕಾರ ಅಗತ್ಯವಾಗಿದೆ ಎಂದರು. ಲಯನ್ಸ್​ ಚಾರಿಟಬಲ್​ ಟ್ರಸ್ಟ್​ ಅಧ್ಯ ಬಾಬಣ್ಣ ಪತ್ತೇಪುರ, ಬಿ.ಬಿ.ಅರಳಿಮಟ್ಟಿ, ವಿಜಯಕುಮಾರ ದಿಂಡಿವಾರ ಇತರರಿದ್ದರು.