ಸುಂಟಿಕೊಪ್ಪ: ತ್ಯಾಗ ಬಲಿದಾನ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಮರು ಪಟ್ಟಣದಲ್ಲಿ ಶೃದ್ಧಾಭಕ್ತಿಯಿಂದ ಸೋಮವಾರ ಆಚರಿಸಿದರು.
ಹೊಸ ಬಟ್ಟೆ ತೊಟ್ಟ ಮಕ್ಕಳು ಸೇರಿದಂತೆ ವಯಸ್ಕರು ಪಟ್ಟಣದ ವಿವಿಧ ಮಸೀದಿಗಳಲ್ಲಿ ಬೆಳಗ್ಗಿನಿಂದಲೇ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸುಂಟಿಕೊಪ್ಪ ಪಟ್ಟಣದ ಸುನ್ನಿ ಶಾಫಿ ಜುಮ್ಮ ಮಸ್ಜಿದ್‌ನಲ್ಲಿ ಮುಸ್ಲಿಯರ್ ಆರೀಫ್ ಸಖಾಫಿ, ಸುನ್ನಿ ಹನಫಿ ಮುಸ್ಲಿಂ ಜಮೀಯ ಮಸೀದಿ ಮೌಲಾನ ಜುಬ್ಬೇರ್ ಹಜರತ್, ಸುನ್ನಿ ಶಾಫಿ ಜುಮಾ ಮಸ್ಜಿದ್ ಧಾರ್ಮಿಕ ಮೌಲವಿ ಮೊಹಮ್ಮದ್ ಹುಸೈನ್,ಕೂಬ್ಬ ಮಸ್ಜಿದ್ ಮೌಲಾನ ಇನಾಂ ಹಾಗೂ ಗದ್ದೆಹಳ್ಳದ ನೂರು ಜುಮ್ಮ ಮಸ್ಜಿದ್‌ನ ಆಸೀಫ್ ಶಾಖಾಫಿ ಧಾರ್ಮಿಕ ಪ್ರವಚನ ನೀಡಿದರು. ನಂತರ ಪರಸ್ಪರ ಅಲಂಗಿಸಿಕೊಳ್ಳುವ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಈದ್ಗಾಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಸಲಾಫಿ ಮಸೀದಿಯಲ್ಲಿ ನಿಶಾದ್ ಸ್ವಲಾಹಿ ಧಾರ್ಮಿಕ ಪ್ರವಚನ ನಡೆಯಿತು. ಪ್ರಾರ್ಥನೆಯಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳು ತೊಡಗಿಸಿಕೊಂಡರು.