ರೇವತಗಾಂವ ಗ್ರಾಮದ ರೈತರು ಹೊಲದಲ್ಲಿ ಸಹ ಭೋಜನ ಮಾಡಿದರು. 
ಜಿಲ್ಲೆ

ಭೂತಾಯಿಗೆ ನೈವೇದ್ಯ ಸಮರ್ಪಣೆ

ಗಿರೀಶ ಸಗರ

ರೇವತಗಾಂವ: ಎಳ್ಳ ಅಮಾವಾಸ್ಯೆ ಉತ್ತರ ಕರ್ನಾಟಕದ ರೈತರ ಪಾಲಿಗೆ ಸಂಭ್ರಮದ ಹಬ್ಬ. ರೇವತಗಾಂವ ಗ್ರಾಮದ ರೈತರು, ಮಹಿಳೆಯರು ಸೋಮವಾರ ಭೂತಾಯಿಗೆ ಪೂಜೆ ಸಲ್ಲಿಸಿ, ಮುತೆದೆಯರಿಗೆ ಉಡಿ ತುಂಬಿ ಸಂಭ್ರಮದಿಂದ ಹಬ್ಬ ಆಚರಿಸಿದರು.

ಬೆಳೆದು ನಿಂತ ಜೋಳ, ಕಡಲೆ ಸೇರಿದಂತೆ ಹಿಂಗಾರು ಬೆಳೆಯಲ್ಲಿ ಪಾಂಡವರನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ, ಸಜ್ಜೆ ರೊಟ್ಟಿ, ಚವಳಿಕಾಯಿ ಚಾಂಗಬಲೋ ಎಂದು ಹೇಳುತ್ತ ಭೂತಾಯಿಗೆ ಚರಗ ಚೆಲ್ಲಿದರು.

ತಮ್ಮ ಮನೆಗಳಲ್ಲಿ ತಯಾರಿಸಿದ ಸಜ್ಜೆ ಕಡಬು, ಹೋಳಿಗೆ, ಹಸಿ ಮೆಣಸಿನಕಾಯಿ ಚೆಟ್ನಿ, ಭರ್ತ, ವಿವಿಧ ಬಗೆಯ ಪಲ್ಯದಿಂದ ಕೂಡಿದ ವಿಶೇಷ ಭಕ್ಷ$್ಯ ಭೂತಾಯಿಗೆ ಅರ್ಪಿಸಿದರು. ನಂತರ ಎಲ್ಲರೂ ಸಹ ಭೋಜನ ಮಾಡಿದರು.

ಸಮೃದ್ಧ ಬೆಳೆ ರೈತರ ಕೈ ಸೇರಲಿ ಎಂಬ ಉದ್ದೇಶದಿಂದ ಚರಗ ಚೆಲ್ಲಲಾಗುತ್ತಿದೆ. ಬೆಳೆಗೆ ರೋಗ ತಗುಲದೆ ಉತ್ತಮ ಇಳುವರಿ ಬರಲಿ ಎಂದು ಕೃಷಿಕರು ಭೂಮಿ ತಾಯಿಗೆ ಪೂಜೆ ಸಲ್ಲಿಸುವ ಪದ್ಧತಿ ರೂಢಿಯಲ್ಲಿದೆ.

ಲಕ್ಷ್ಮೀಬಾಯಿ ಮಾಳಿ, ಗ್ರಾಪಂ ಸದಸ್ಯೆ