ಜಿಲ್ಲೆ

ಸುಪಾ ಜಲಾಶಯಕ್ಕೆ ಬಾಗಿನ ಅರ್ಪಣೆ

ಜೊಯಿಡಾ: ಸುಪಾ ಅಣೆಕಟ್ಟು ರಾಜ್ಯವು ಆರ್ಥಿಕವಾಗಿ ಅಭಿವೃದ್ಧಿಯಾಗಲು ಕಾರಣವಾಗಿದೆ. ಜಲಾಶಯವು ರಾಜ್ಯದ ಅಭಿವೃದ್ಧಿಗೆ ಎಲ್ಲ ರೀತಿಯಿಂದ ಸಹಕಾರಿಯಾಗಿದೆ. ಅಣೆಕಟ್ಟು ನಿರ್ವಣವಾದ ನಂತರ ಜಲಾಶಯ ನಾಲ್ಕು ಸಲ ಭರ್ತಿಯಾಗಿದೆ. 564 ಮೀ ಎತ್ತರದ ಜಲಾಶಯ 558.6 ಮೀ.ಗಳಷ್ಟು ತುಂಬಿಕೊಂಡಿದೆ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಹೇಳಿದರು.

ತಾಲೂಕಿನ ಗಣೇಶಗುಡಿಯಲ್ಲಿ ಮಂಗಳವಾರ ಸುಪಾ ಜಲಾಶಯಕ್ಕೆ ಪೂಜೆಗೈದು ಬಾಗಿನ ಅರ್ಪಿಸಿ ಅವರು ಮಾತನಾಡಿದರು.

ಸುಪಾ ಅಣೆಕಟ್ಟು ಸುರಕ್ಷತೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ವಿದ್ಯುತ್ ಇಲೆಕ್ಟ್ರಾನಿಕ್ ಇಂಜಿನಿಯರ್ ಕೆ.ಎ. ಭಟ್ಟ ಉತ್ತರಿಸಿ ಈಗಾಗಲೇ ಸರ್ಕಾರದ ಆದೇಶದಂತೆ ಜಲಾಶಯದ ಗೇಟ್ ಸುರಕ್ಷತೆ ತಂಡ ಬಂದು ಪರಿಶೀಲಿಸಿದೆ. ಜಲಾಶಯದ ಮೂರು ಗೇಟ್​ಗಳಲ್ಲಿ ಯಾವುದೇ ತೊಂದರೆ ಇಲ್ಲ ಎಂದರು.

ಕೆಪಿಸಿ ಮುಖ್ಯ ಇಂಜಿನಿಯರ್ ರಾಜಶೇಖರ, ಶಿವಪ್ರಸಾದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಯ ದೇಸಾಯಿ, ಅವೇಡಾ ಗ್ರಾಪಂ ಅಧ್ಯಕ್ಷ ಅರುಣ ಭಗವತಿರಾಜ, ಜಿಪಂ ಮಾಜಿ ಸದಸ್ಯ ರಮೇಶ ನಾಯ್ಕ, ಶರಣಪ್ಪ ಗದ್ದಿ, ಇತರರಿದ್ದರು.