ಕೆರೂರ : ಅಧಿಕ ಮಾಸದ ನಿಮಿತ್ತ ಆರ್ಯ ವೈಶ್ಯ ಮಹಿಳಾ ಮಂಡಳದಿಂದ ಪುರುಷೋತ್ತಮನಿಗೆ ಲಕ್ಷ ತುಳಸಿದಳ ಅರ್ಚನೆ ಮಾಡಲಾಯಿತು.
ಪಟ್ಟಣದ ಹಳಪೇಟೆ ಬಡಾವಣೆಯ ನಗರೇಶ್ವರ ದೇವಸ್ಥಾನದಲ್ಲಿ ಅಧಿಕ ಮಾಸದ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ವಾಸವಿ ಮಹಿಳಾ ಮಂಡಳ ಕೆರೂರ ಘಟಕ ಅಧ್ಯಕ್ಷೆ ಜ್ಯೋತಿ ಹಂದ್ರಾಳ ಮಾತನಾಡಿ, ದೇವರ ನಾಮಸ್ಮರಣೆ, ಧಾನ-ಧರ್ಮ ಮಾಡುವುದರಿಂದ ಜೀವನದಲ್ಲಿ ಉತ್ತಮ ಆರೋಗ್ಯ, ಸಕಲ ಸೌಭಾಗ್ಯ ದೊರೆಯುತ್ತದೆ ಎಂದು ಹೇಳಿದರು.
ಇದನ್ನೂ ಓದಿ : ತುಂಬಿದ ಕೃಷ್ಣೆ, ಮಲಪ್ರಭೆ ಒಡಲು
ವಾಸವಿ ಮಹಿಳಾ ಮಂಡಳ ಸದಸ್ಯರಾದ ಗೀತಾ ಕಂದಕೂರ, ಪದ್ಮಾವತಿ ವಿಜಾಪೂರ, ಸಂಗೀತಾ ವಿಜಾಪೂರ, ಸೀಮಾ ಕಂದಕೂರ, ವಾಣಿಶ್ರೀ ಕಂದಕೂರ, ವಾಣಿಶ್ರೀ ಕಂದಕೂರ, ಸ್ನೇಹಾ ಕಂದಕೂರ, ಶ್ರೀದೇವಿ ವಿಜಾಪೂರ, ಭಾಗ್ಯಾ ಹಂದ್ರಾಳ, ವಾಣಿ ಕೆಂಚನಗುಡ್ಡ, ಸಪ್ನಾ ಕಂದಕೂರ, ಶ್ರೀರಕ್ಷ ಹೆಬಸೂರ, ಸಮೀಕ್ಷಾ ವಿಜಾಪೂರ, ರಿಷಿಕಾ ವಿಜಾಪೂರ, ಪ್ರತೀಕ್ಷಾ ವಿಜಾಪೂರ ಹಾಗೂ ಆರ್ಯ ವೈಶ್ಯ ಸಮಾಜದ ಎಲ್ಲ ಹಿರಿಯರು ಭಾಗವಹಿಸಿದ್ದರು.