ಚನ್ನಮ್ಮನ ಕಿತ್ತೂರು: ಇಲ್ಲಿನ ಪೊಲೀಸ್ ಠಾಣೆ ಅನುಕೂಲಕ್ಕೆ ಶಾಸಕರ ಅನುದಾನದಡಿ ಒಂದು ವಾಹನ ನೀಡಲಾಗಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಪಟ್ಟಣದ ಪೊಲೀಸ್ ವೃತ್ತ ನಿರೀಕ್ಷಕರಿಗೆ ಶುಕ್ರವಾರ ವಾಹನ ಹಸ್ತಾಂತರಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹೊಸ ವಾಹನ ನೀಡಲಾಗಿದೆ. ಇಲಾಖೆ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಹೆಚ್ಚುವರಿ ಎಸ್ಪಿ ಆರ್.ಬಿ.ಬಸರಗಿ, ಕಿತ್ತೂರು ಸಿಪಿಐ ಶಿವಾನಂದ ಗುಡುಗನಟ್ಟಿ, ಪಿಎಸ್ಐ ಪ್ರವಿಣ ಗಂಗೋಳ, ಪ್ರವಿಣ ಕೋಟಿ, ಡಿವೈಎಸ್ಪಿ ರವಿ ನಾಯ್ಕ ಇತರರು ಇದ್ದರು.