ಪತ್ರಕರ್ತರ ಮೇಲಿನ ಪೊಲೀಸರ ದಬ್ಬಾಳಿಕೆ ಖಂಡಿಸಿ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಸರ್ವೋತ್ತಮ ಜಾರಕಿಹೊಳಿ, ದಿಲೀಪ ಕುರಂದವಾಡೆ, ಮಂಜುನಾಥ ಪಾಟೀಲ, ಪುಂಡಲೀಕ ಬಾಳೋಜಿ ಇತರರಿದ್ದರು. 
ಜಿಲ್ಲೆ

ಪತ್ರಕರ್ತರ ಮೇಲಿನ ಖಾಕಿ ದಬ್ಬಾಳಿಕೆ ಖಂಡನೀಯ

ಬೆಳಗಾವಿ: ಜಿಲ್ಲಾದ್ಯಂತ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಮೇಲೆ ಪೊಲೀಸ್ ಇಲಾಖೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಆರೋಪಿಸಿ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.

ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಸರ್ಕಾರದ ಗಮನ ಸೆಳೆಯುವ ಮಾಧ್ಯಮದ ಸ್ವಾತಂತ್ರ್ಯ ಹತ್ತಿಕುವ ಕೆಲಸ ಪೊಲೀಸ್ ಇಲಾಖೆ ಮಾಡುತ್ತಿದೆ. ನಿರ್ಭಯವಾಗಿ ಕೆಲಸ ಮಾಡಲು ಪೊಲೀಸ್ ಇಲಾಖೆ ಅಡ್ಡಿ ಪಡಿಸುತ್ತಿರುವುದು ಖಂಡನೀಯ. ಪತ್ರಕರ್ತರ ಜತೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮರ್ಪಕವಾಗಿ ವರ್ತಿಸುತ್ತಿಲ್ಲವೆಂದು ಪತ್ರಕರ್ತರು ದೂರಿದರು. ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ನಗರ ಆಯುಕ್ತರ ಜತೆ ಸಭೆ ನಡೆಸಿ, ಸಮಸ್ಯೆ ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದರು. ಕಾನಿಪ ಸಂಘದ ಗೌರವಾಧ್ಯಕ್ಷ ಸರ್ವೋತ್ತಮ ಜಾರಕಿಹೊಳಿ, ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ, ಮಂಜುನಾಥ ಪಾಟೀಲ, ಪುಂಡಲೀಕ ಬಾಳೋಜಿ, ಸಹದೇವ ಮಾನೆ, ಮೆಹಬೂಬ ಮಕಾಂದರ, ಚೇತನ ಹೊಳೆಪ್ಪಗೋಳ, ರವಿ ಕಾಂಬಳೆ, ಸಚಿನ ಖೋತ, ಮಹಾಂತೇಶ ಅರಕೇರೆ ಇತರರಿದ್ದರು.