ಜಿಲ್ಲೆ

ದೇವರ ಸ್ಮರಣೆಯಿಂದ ಮನಸ್ಸಿಗೆ ನೆಮ್ಮದಿ

ನಾಗರಮುನ್ನೋಳಿ: ಸಾಧು-ಸಂತರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದರೆ ಜೀವನ ಪಾವನವಾಗುತ್ತದೆ ಎಂದು ಕೌಲಗುಡ್ಡದ ಅಮರೇಶ್ವರ ಮಹಾರಾಜರು ಹೇಳಿದರು.

ಗ್ರಾಮದ ಸಿದ್ಧೇಶ್ವರ ಆವರಣದಲ್ಲಿ ನಿರ್ಮಿಸಿರುವ ಯಲ್ಲಮ್ಮದೇವಿ ಹಾಗೂ ಸಿದ್ಧಪ್ಪ ಅಜ್ಜನ ದೇವಸ್ಥಾನದ ಕಟ್ಟಡ ಹಾಗೂ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿ, ದೇವರ ನಾಮಸ್ಮರಣೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುತ್ತದೆ ಎಂದರು.

ಕಬ್ಬೂರಿ ಗೌರಿ ಶಂಕರ ಮಠದ ರೇವಣಸಿದ್ಧ ಸ್ವಾಮೀಜಿ ಮಾತನಾಡಿ, ಪ್ರವಚನ ಕೇಳುವುದರಿಂದ ಜೀವನ ಮಟ್ಟ ಸುಧಾರಣೆಯಾಗುತ್ತದೆ. ಎಲ್ಲ ಧರ್ಮದವರು ಸೇರಿ ಬೇಧ-ಭಾವವಿಲ್ಲದೆ ಕೈಗೊಳ್ಳುವ ಕಾರ್ಯದಿಂದ ಗ್ರಾಮದ ಕೀರ್ತಿ ಹೆಚ್ಚುತ್ತದೆ ಎಂದು ತಿಳಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದಪ್ಪ ಮರ‌್ಯಾಯಿ ಮಾತನಾಡಿದರು. ವೇದಮೂರ್ತಿ ಮದನ ಪುರಾಣಿಕ ನೇತೃತ್ವದಲ್ಲಿ ಹೋಮ-ಹವನ, ಅಭಿಷೇಕ ಜರುಗಿತು.

ಗ್ರಾಪಂ ಅಧ್ಯಕ್ಷೆ ರಾಜಮಾ ಮುಲ್ತಾನಿ, ಜಿಲ್ಲಾ ಯೂಥ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವಾನಂದ ಮರ‌್ಯಾಯಿ, ಪಿಕೆಪಿಎಸ್ ಅಧ್ಯಕ್ಷ ರಾಜು ಕುಂಬಾರ, ಮಾರುತಿ ಮರ‌್ಯಾಯಿ, ಶಿವಪುತ್ರ ಮನಗೂಳಿ, ಎಂ.ಬಿ.ಆಲೂರೆ, ಅರುಣ ಮರ‌್ಯಾಯಿ, ಮಹಾದೇವ ಚೌಗಲಾ, ಭೀರಪ್ಪ ನಾಗರಾಳೆ, ಶಿವಪ್ಪ ಮರ‌್ಯಾಯಿ, ಮಾರುತಿ ಕಿಲ್ಲೇದಾರ, ವಾಸಪ್ಪ ನಾಗರಾಳೆ, ರಾಜು ಚೌವ್ಹಾಣ, ಮಹಾಲಿಂಗ ಬಸ್ತವಾಡೆ, ಬಸವರಾಜ ಚೌಗಲಾ, ಅನಿಲ ಈಟಿ, ರಘು ಬಡಿಗೇರ, ಸಂತೋಷ ಬಾಯನಾಯ್ಕ, ಸುರೇಶ ಪೂಜೇರಿ, ರಾಮಪ್ಪ ಹಾಲಟ್ಟಿ, ಸಿದ್ದು ಈಟಿ, ಸುರೇಶ ಕೋಟಿ, ಸಂಜು ಬಾನೆ, ಬಾಳಪ್ಪ ಮರ‌್ಯಾಯಿ ಇತರರು ಇದ್ದರು.