ಜಿಲ್ಲೆ

ವೈದ್ಯಕೀಯ ಸೇವಾ ಶಿಬಿರ

Mangaluru - Nishantha Narayana


ವಿಟ್ಲ: ಒಡಿಯೂರು ಶ್ರೀ ಜನ್ಮದಿನೋತ್ಸವ - ಸೇವಾ ಸಂಭ್ರಮ ಗ್ರಾಮೋತ್ಸವ ೨೦೨೪ ಪ್ರಯುಕ್ತ ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಜು.೧೪ರಂದು ಬೆಳಗ್ಗೆ ೯.೩೦ರಿಂದ ಬೃಹತ್ ವೈದ್ಯಕೀಯ ಸೇವಾ ಶಿಬಿರ ನಡೆಯಲಿದೆ.


ಬೆಳಗ್ಗೆ ೯.೩೦ಕ್ಕೆ ಶ್ರೀ ಗುರುದೇವಾನಂದ ಸ್ವಾಮೀಜಿ ಶಿಬಿರ ಉದ್ಘಾಟಿಸಲಿದ್ದಾರೆ. ಸಾಽ ಮಾತಾನಂದಮಯೀ ಉಪಸ್ಥಿತರಿರುವರು. ಮಂಗಳೂರು ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ನಾಡೋಜ ಡಾ.ಕೃಷ್ಣಪ್ರಸಾದ್ ಕೂಡ್ಲು, ಎ.ಬಿ. ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಮಹಾವಿದ್ಯಾಲಯದ ಹಿರಿಯ ಉಪನ್ಯಾಸಕ ಡಾ.ತಾರಾಚಂದ್ರನ್, ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಯ ರಕ್ತನಿಽ ವಿಭಾಗ ಮುಖ್ಯಸ್ಥ ಡಾ. ಶರತ್‌ಕುಮಾರ್ ರಾವ್ ಜೆ., ಜಿಲ್ಲಾ ಆಯುಷ್ ಅಽಕಾರಿ ಡಾ. ಮಹಮ್ಮದ್ ಇಕ್ಬಾಲ್, ಕನ್ಯಾನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಽಕಾರಿ ಡಾ.ಕೃಷ್ಣಮೂರ್ತಿ ಡಿ., ಬೆಂಗಳೂರು ಒನ್‌ಸೈಟ್ ಎಸ್ಸಿಲಾರ್ ಲಕ್ಸೋಟಿಕ್ ಫೌಂಡೇಶನ್‌ನ ಮುಖ್ಯ ವ್ಯವಸ್ಥಾಪಕ ಧರ್ಮಪ್ರಸಾದ್ ರೈ ಭಾಗವಹಿಸಲಿದ್ದಾರೆ.


ಶಿಬಿರದಲ್ಲಿ ನೇತ್ರ ತಪಾಸಣೆ, ಉಚಿತ ಕನ್ನಡಕ ವಿತರಣೆ - ಬೃಹತ್ ರಕ್ತದಾನ ಶಿಬಿರ - ಆಯುರ್ವೇದಿಕ್ ಆರೋಗ್ಯ ತಪಾಸಣೆ - ಚಿಕಿತ್ಸಾ ಶಿಬಿರ, ಹೃದಯ ತಪಾಸಣೆ-ಎಲುಬು ತಪಾಸಣೆ, ದಂತ ಚಿಕಿತ್ಸೆ, ಸ್ತ್ರೀರೋಗ ತಪಾಸಣೆ ಹಾಗೂ ಚಿಕಿತ್ಸೆ, ರಕ್ತದೊತ್ತಡ, ಮಧುಮೇಹ ತಪಾಸಣೆ ನಡೆಯಲಿದೆ.