ವಿಟ್ಲ: ಹಿತ-ಮಿತ, ಋತುಗಳಿಗೆ ಸರಿಯಾಗಿ ಆಹಾರ ಸೇವನೆ ಮಾಡುವ ಮೂಲಕ ಸ್ವಾಸ್ಥ÷್ಯ ಕಾಪಾಡಬಹುದು. ರಕ್ತಕ್ಕೆ ಪರ್ಯಾಯ ವ್ಯವಸ್ಥೆಯಿಲ್ಲದ ಕಾರಣ ರಕ್ತದಾನ ಮಾಡುವ ಮೂಲಕ ಜನರ ಪ್ರಾಣವನ್ನು ಉಳಿಸಬಹುದಾಗಿದ್ದು, ಅಗತ್ಯವನ್ನು ಕಂಡುಕೊAಡು ಪೂರೈಕೆ ಮಾಡಬೇಕು. ಮಾನವ ಸೇವೆಯ ಮೂಲಕ ಮಾಧವನನ್ನು ಸಂತೃಪ್ತಿ ಮಾಡಬಹುದಾಗಿದ್ದು, ಜನರಲ್ಲಿ ಅರಿವು ಮೂಡಿಸಿ ಸೇವೆಯಲ್ಲಿ ಮನಸ್ಸು ಮಾಡುವಂತೆ ಮಾಡಬೇಕು ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ಹೇಳಿದರು.
ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸೇವಾ ಸಂಭ್ರಮ ಗ್ರಾಮೋತ್ಸವ 2024 ಪ್ರಯುಕ್ತ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಮಂಗಳೂರು, ಒನ್‌ಸೈಟ್ ಎಸ್ಸಿಲಾರ್ ಲಕ್ಸೋಟಿಕಾ ಫೌಂಡೇಷನ್ ಬೆಂಗಳೂರು, ನೇತ್ರಜ್ಯೋತಿ ಚಾರಿಟೆಬಲ್ ಟ್ರಸ್ಟ್, ವೆನ್‌ಲಾಕ್ ಜಿಲ್ಲಾಸ್ಪತ್ರೆ, ಜಿಲ್ಲಾ ಆಯುಷ್ ಇಲಾಖೆ ಮಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ), ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೆಬಲ್ ಆಸ್ಪತ್ರೆ, ಎ.ಬಿ. ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಮಹಾವಿದ್ಯಾಲಯ, ದೇರಳಕಟ್ಟೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಕನ್ಯಾನ ಸಹಯೋಗದಲ್ಲಿ ನಡೆದ ಬೃಹತ್ ವೈದ್ಯಕೀಯ ಸೇವಾ ಶಿಬಿರವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಾಽ್ವÃ ಮಾತಾನಂದಮಯೀ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಕ್ಷೇತ್ರದಲ್ಲಿ ಆಗಸ್ಟ್ 8ರಂದು ನಡೆಯುವ ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಗ್ರಾಮೋತ್ಸವ 2024 ಗುರುವಂದನ - ಸೇವಾ ಸಂಭ್ರಮ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಮಾಡಲಾಯಿತು.
ದೇರಳಕಟ್ಟೆ ದಂತ ವೈದ್ಯಕೀಯ ಮಹಾ ವಿದ್ಯಾಲಯದ ಹಿರಿಯ ಉಪನ್ಯಾಸಕಿ ಡಾ.ತಾರಾಚಂದ್ರನ್, ಮಂಗಳೂರು ವೆನ್ಲಾಕ್ ಆಸ್ಪತ್ರೆಯ ರಕ್ತನಿಽ ವಿಭಾಗ ಮುಖ್ಯಸ್ಥ ಡಾ.ಶರತ್ ಕುಮಾರ್ ಜೆ ರಾವ್, ಕನ್ಯಾನ ಪ್ರಾಥಮಿಕ ಆರೋಗ್ಯ ಕೇಂದ್ರದ ವೆದ್ಯಾಽಕಾರಿ ಡಾ. ಕೃಷ್ಣ ಮೂರ್ತಿ ಡಿ., ಕೆ. ಎಸ್. ಹೆಗ್ಡೆ ಚಾರಿಟೆಬಲ್ ಆಸ್ಪತ್ರೆಯ ಮಾರುಕಟ್ಟೆ ಅಽಕಾರಿ ಜೈಸನ್, ಬೆಂಗಳೂರು ಒನ್ ಸೈಟ್ ಎಸ್ಸಿಲೋರ್ ಲಕ್ಸೋಟಿಕ್ ಫೌಂಡೇಷನ್ ಮುಖ್ಯ ವ್ಯವಸ್ಥಾಪಕ ಧರ್ಮಪ್ರಸಾದ್ ರೈ, ಮಂಗಳೂರು ಪ್ರಸಾದ್ ನೇತ್ರಾಲಯದ ಡಾ. ಶ್ರೀಕೀರ್ತಿ, ಮಂಗಳೂರು ಆಯುಷ್ ಆಸ್ಪತ್ರೆ ವೈದ್ಯಾಽಕಾರಿಗಳಾದ ಡಾ. ಹೇಮಾವಾಣಿ, ಡಾ. ಕೃಷ್ಣ ಪ್ರಸಾದ್, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷ ಎ. ಸುರೇಶ್ ರೈ, ಒಡಿಯೂರು ಶ್ರೀಗಳ ಜನ್ಮದಿನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ, ಕೋಶಾಽಕಾರಿ ಎ. ಅಶೋಕ್ ಕುಮಾರ್ ಬಿಜೈ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಉಡುಪಿ ವಲಯ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಒಡಿಯೂರು ಶ್ರೀಗಳ ಜನ್ಮದಿನೋತ್ಸವ ಸಮಿತಿ ಸಂಘಟನಾ ಕಾರ್ಯದರ್ಶಿ ಮಾತೇಶ್ ಭಂಡಾರಿ ಸ್ವಾಗತಿಸಿದರು. ಯೋಜನೆಯ ಮೇಲ್ವಿಚಾರಕಿ ಲೀಲಾ ವಂದಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
ವೈಜ್ಞಾನಿಕ ಚಿಂತನೆಗಳನ್ನು ಇಟ್ಟುಕೊಂಡು ಸ್ವಾಮೀಜಿಯವರು ಮುಂದುವರಿಯುತ್ತಿವುದು ಸಮಾಜಕ್ಕೆ ಸಹಕಾರಿಯಾಗಿದೆ. ಡೆಂಘೆ ಜ್ವರದಲ್ಲಿ ಪ್ಲೇಟ್‌ಲೆಟ್ ಅಂಶ 10 ಸಾವಿರಕ್ಕೆ ತಲುಪಿದಾಗ ಅದನ್ನು ರಕ್ತದಿಂದ ನೀಡಬೇಕಾಗುತ್ತದೆ. 350 ಎಂ.ಎಲ್. ರಕ್ತದಲ್ಲಿ ಬರೀ 20ರಿಂದ 30 ಎಂ.ಎಲ್. ಪ್ಲೇಟ್‌ಲೆಟ್ ಸಂಗ್ರಹಿಸಬಹುದಾಗಿದ್ದು, ಅದನ್ನು 5 ದಿನ ಮಾತ್ರ ಇಡಬಹುದಾಗಿದೆ. ಈಗ ದಿನಕ್ಕೆ 150ರಷ್ಟು ಡೆಂಘೆ ಪ್ರಕರಣಗಳು ಬರುತ್ತಿರುವ ಕಾರಣ ಪ್ಲೇಟ್‌ಲೆಟ್ ಬೇಡಿಕೆ ಹೆಚ್ಚಾಗಿದೆ.
| ಡಾ.ಶರತ್ ಕುಮಾರ್ ಜೆ ರಾವ್
ಮುಖ್ಯಸ್ಥರು, ರಕ್ತ ನಿಽ ವಿಭಾಗ, ವೆನ್ಲಾಕ್ ಆಸ್ಪತ್ರೆ
ಶಿಬಿರದಲ್ಲಿ ಭಾಗಿ..
ಸೇವಾ ಶಿಬಿರದ ನೇತ್ರ ಚಿಕಿತ್ಸೆಯಲ್ಲಿ 250 ಮಂದಿ, ದಂತ ಚಿಕಿತ್ಸೆಯಲ್ಲಿ 60 ಮಂದಿ, ಆಯುಷ್ ವಿಭಾಗದಲ್ಲಿ 90 ಮಂದಿ, ಕೆ. ಎಸ್. ಹೆಗ್ಡೆ ಆಸ್ಪತ್ರೆಯ ವಿವಿಧ ಚಿಕಿತ್ಸೆಯಲ್ಲಿ 111 ಮಂದಿ, ರಕ್ತದೊತ್ತಡ, ಮಧುಮೇಹ ತಪಾಸಣೆಯಲ್ಲಿ 122 ಮಂದಿ, ರಕ್ತದಾನದಲ್ಲಿ 40 ಮಂದಿ ಭಾಗವಹಿಸಿದರು.