ಜನ್ಮದಿನೋತ್ಸವ ಗ್ರಾಮೋತ್ಸವದ ಅಂಗವಾಗಿ ನಡೆದ ಕೆಸರ್ದ ಒಳಾಂಗಣ ಸ್ಪರ್ಧೆಗಳಿಗೆ ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಚಾಲನೆ ನೀಡಿದರು. ಲೋಕನಾಥ ಶೆಟ್ಟಿ ತಾಳಿಪ್ಪಾಡಿಗುತ್ತು, ಕೃಷ್ಣ ಶೆಟ್ಟಿ ತಾರೆಮಾರು, ಭವಾನಿಶಂಕರ ಶೆಟ್ಟಿ ಪುತ್ತೂರು, ಶಶಿಧರ ಶೆಟ್ಟಿ ಜಮ್ಮದಮನೆ ಇದ್ದರು.  
ಜಿಲ್ಲೆ

ಅಂತರಂಗ ಪ್ರವೇಶಕ್ಕೆ ಪ್ರೇಮತತ್ವ ರಹದಾರಿ ODIYOORU

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಶ್ರೀ ಗುರುದೇವಾನಂದ ಸ್ವಾಮೀಜಿ ಶುಭನುಡಿ
  • ಒಳಾಂಗಣ ಸ್ಪರ್ಧೆಗಳಿಗೆ ಚಾಲನೆ
ವಿಟ್ಲ: ಕಷ್ಟಗಳನ್ನು ಸೋಪಾನವಾಗಿಸಿಕೊಂಡು ಮುನ್ನಡೆದಾಗ ಜೀವನದಲ್ಲಿ ಯಶಸ್ಸು ಲಭಿಸುತ್ತದೆ. ಸಾಮರ್ಥ್ಯಗಳು ಧರ್ಮ ಸಂರಕ್ಷಣೆಗೆ ಬಳಕೆಯಾಗಬೇಕು. ಧರ್ಮ ಶ್ರದ್ಧೆಯ ಹೋರಾಟ ನಮ್ಮೊಳಗೆ ನಡೆಯಬೇಕು. ಅಂತರಂಗದ ಪ್ರವೇಶಕ್ಕೆ ಪ್ರೇಮತತ್ವ ರಹದಾರಿಯಾಗಿದ್ದು, ಅಂತರಂಗವನ್ನು ಸ್ವಚ್ಛ ಮಾಡುವ ಜತೆಗೆ ವಿಜಯ ಸಾಧಿಸುವ ಕಾರ್ಯವಾಗಬೇಕು. ಬುದ್ಧಿ ಚುರುಕಾಗಲು ಬೇಕಾದ ವ್ಯವಸ್ಥೆಗೆ ಒತ್ತು ನೀಡಬೇಕು. ಪರೋಪಕಾರ ಬದುಕಿನ ದೊಡ್ಡ ಆಸ್ತಿಯಾಗಿದೆ ಎಂದು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದಲ್ಲಿ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿ ವತಿಯಿಂದ ಜನ್ಮದಿನೋತ್ಸವ ಗ್ರಾಮೋತ್ಸವದ ಅಂಗವಾಗಿ ನಡೆದ ಕೆಸರ್ದ ಒಳಾಂಗಣ ಸ್ಪರ್ಧೆಗಳನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಜನ್ಮದಿನೋತ್ಸವ ಸಮಿತಿ ಅಧ್ಯಕ್ಷ ಲೋಕನಾಥ ಶೆಟ್ಟಿ ತಾಳಿಪ್ಪಾಡಿಗುತ್ತು, ಕಾರ್ಯಾಧ್ಯಕ್ಷ ಕೃಷ್ಣ ಶೆಟ್ಟಿ ತಾರೆಮಾರು, ಒಡಿಯೂರು ಶ್ರೀ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕ ಭವಾನಿಶಂಕರ ಶೆಟ್ಟಿ ಪುತ್ತೂರು, ಪ್ರಧಾನ ಕೋಶಾಧಿಕಾರಿ ಶಶಿಧರ ಶೆಟ್ಟಿ ಜಮ್ಮದಮನೆ, ಕ್ರೀಡಾ ಸಮಿತಿ ಸಂಚಾಲಕ ರಮೇಶ್‌ ಶೆಟ್ಟಿ ಅನೆಯಾಲಗುತ್ತು, ಕಾರ್ಯದರ್ಶಿ ತಾರಾಸುಂದರ ರೈ, ಉಪಾಧ್ಯಕ್ಷೆ ಹರಿಣಾಕ್ಷಿ ಜೆ.ಶೆಟ್ಟಿ, ಯಶವಂತ ವಿಟ್ಲ, ಸೇರಾಜೆ ಗಣಪತಿ ಭಟ್‌, ರೇಣುಕಾ ಎಸ್‌.ರೈ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಅನಿತಾ ಸ್ವಾಗತಿಸಿ, ಗಂಗಾ ವಂದಿಸಿ, ಹೇಮಾವತಿ ನಿರೂಪಿಸಿದರು.