ಜಿಲ್ಲೆ

ತಾಯಿ-ಮಗುವಿನ ನಡುವಿನ ಸಂಬಂಧವೇ ವಾತ್ಸಲ್ಯ - ಒಡಿಯೂರು ಸ್ವಾಮೀಜಿ ಆಶೀರ್ವಚನ - ಮಾತೃ ಪೂಜನ, ಸಾಮೂಹಿಕ ಹುಟ್ಟುಹಬ್ಬ

ವಿಟ್ಲ: ಸಾಮೂಹಿಕವಾಗಿ ಪೂಜೆಯನ್ನು ನಡೆಸುವುದರಲ್ಲಿ ವಿಶೇಷವಾದ ಮಹತ್ವವಿದೆ. ಮಕ್ಕಳು, ಪಾಲಕರು, ಶಿಕ್ಷಕರು ಸೇರಿ ಇಲ್ಲಿ ತ್ರಿವೇಣಿ ಸಂಗಮವಾಗಿದೆ. ಮಾತೃತ್ವ ಸೇರಿಕೊಂಡಾಗ ಮಾತ್ರ ಮಾತೆಗೆ ಬಲ ಬರುವುದು. ತಾಯಿ ಮತ್ತು ಮಗುವಿನ ಸಂಬಂಧವೇ ವಾತ್ಸಲ್ಯ. ಮಕ್ಕಳಲ್ಲಿ ಪ್ರೀತಿಯೂ ಬೇಕು, ಭೀತಿಯೂ ಬೇಕು. ಮಕ್ಕಳ ನಿಯಂತ್ರಣಕ್ಕೆ ಭೀತಿಯ ಅಗತ್ಯವಿದೆ. ಮಕ್ಕಳು ದಾರಿ ತಪ್ಪದಂತೆ ಆಗಬೇಕಾದರೆ ಸಂಸ್ಕಾರ ಅಗತ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವತಿಯಿಂದ ಜರಗಿದ ಮಾತೃ ಪೂಜನ ಮತ್ತು ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಆಚರಣೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಸಾಽ ಮಾತನಂದಮಯೀ ಆಶೀರ್ವಚನ ನೀಡಿ, ಮಹಿಳೆ ಎಲ್ಲಿ ಗೌರವಿಸಲ್ಪಡುತ್ತಾಳೊ ಅಲ್ಲಿ ದೇವತೆಗಳ ಅನುಗ್ರಹವಿರುತ್ತದೆ ಎಂಬ ಉಕ್ತಿಯಿದೆ. ಯುವ ಜನಾಂಗ ಜಗೃತವಾಗಬೇಕಾದರೆ ಮಾತೆಯರ ಪಾತ್ರ ಮಹತ್ತರವಾದುದು. ಮಕ್ಕಳಿಗೆ ತಾಯಿಯೇ ರೋಲ್‌ಮಾಡೆಲ್. ನಮ್ಮ ನೆಲದ ಸಂಸ್ಕೃತಿ, ಆಚಾರವಿಚಾರವನ್ನು ತಿಳಿಸಿ, ಬೆಳೆಸುವ ಕಾರ್ಯ ಮಾತೆಯರಿಂದ ಸಾಧ್ಯ. ಯಕ್ಷಪ್ರಶ್ನೆಯಲ್ಲಿ ಬರುವಂತಹ ವಿಚಾರ ಭೂಮಿಗಿಂತ ಗುರುತರ ತಾಯಿ, ಆಕಾಶಕ್ಕಿಂತ ಎತ್ತರ ತಂದೆ. ಈ ರೀತಿಯಾಗಿ ಗೌರವ ಭಾವನೆಯನ್ನು ಭಾರತೀಯ ಪರಂಪರೆಯಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ತಿಳಿಸಿದರು.

ಮಾತೃಪೂಜನದ ವಿಽವಿಧಾನವನ್ನು ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯ ನಡೆಸಿಕೊಟ್ಟರು. ಮುಖ್ಯಶಿಕ್ಷಕಿ ರೇಣುಕಾ ಎಸ್. ರೈ ಸ್ವಾಗತಿಸಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಸೇರಾಜೆ ಗಣಪತಿ ಭಟ್ ಪ್ರಸ್ತಾವನೆಗೈದರು. ಮಾತೃಮಂಡಳಿ ಸದಸ್ಯೆ ವಿಮಲ ವಂದಿಸಿದರು. ಸಹಶಿಕ್ಷಕಿ ಹೇಮಾವತಿ ಕಾರ್ಯಕ್ರಮ ನಿರೂಪಿಸಿದರು.

ಮಕ್ಕಳನ್ನು ಬೆಳೆಸುವ ರೀತಿ ಹೇಗಿದೆ ಎಂಬ ಅರಿವಿರಬೇಕು. ಭಾರತೀಯ ಪರಂಪರೆಗೆ ಪೂರಕವಾಗಿ ಹುಟ್ಟುಹಬ್ಬವನ್ನು ಆಚರಿಸುವುದು ಅನುಸರಣೀಯ. ಭಾರತೀಯ ಪರಂಪರೆ ಬಗ್ಗೆ ಬೆಳಕು ಚೆಲ್ಲಬೇಕು. ಎಲ್ಲ ದೇಶಗಳೂ ನೋಡುವುದು ಭಾರತದೆಡೆಗೆ. ಆದರೆ ನಾವು ಮಾತ್ರ ಪಾಶ್ಚಮಾತ್ಯ ಸಂಸ್ಕೃತಿಯ ಕಡೆಗೆ ವಾಲುತ್ತಿರುತ್ತೇವೆ. ಅದಾಗಬಾರದು ಎಂಬ ದೃಷ್ಟಿಯಿಂದ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ. ಮಕ್ಕಳಲ್ಲಿ ಸಂಸ್ಕಾರದ ಬೀಜಗಳನ್ನು ಬಿತ್ತಿ, ಸದ್ವಿಚಾರಗಳನ್ನು ತುಂಬಿ ಭಾರತದ ಸತ್ಪ್ರಜೆಗಳನ್ನಾಗಿಸುವ.

| ಶ್ರೀ ಗುರುದೇವಾನಂದ ಸ್ವಾಮೀಜಿ, ಗುರುದೇವದತ್ತ ಸಂಸ್ಥಾನ