ಜಿಲ್ಲೆ

ಒಡಿಯೂರ್ದ ತುಳುಕೂಟದ ಆಶ್ರಯದಲ್ಲಿ ’ಆಟಿ ಮುಗಿತಲ ಲೇಸ್’ ಕಾರ್ಯಕ್ರಮ

Mangaluru - Nishantha Narayana

ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಒಡಿಯೂರ್ದ ತುಳುಕೂಟದ ಆಶ್ರಯದಲ್ಲಿ ನಡೆದ ’ಆಟಿ ಮುಗಿತಲ ಲೇಸ್’ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ವಿವಿಧ ಸ್ವಸಹಾಯ ಗುಂಪುಗಳಿಗೆ ಲಾಭಾಂಶವನ್ನು ವಿತರಣೆ ಮಾಡಲಾಯಿತು. ಆಟಿಯ ತಿನಿಸುಗಳ ಸ್ಪರ್ಧೆಯಲ್ಲಿ ಸಿಹಿತಿಂಡಿ ಮತ್ತು ಕಾರ ತಿಂಡಿ ವಿಭಾಗದಲ್ಲಿ ಯಶೋದಾ ಲಿಂಗಪ್ಪ ಗೌಡ ಪ್ರಥಮ, ಸಿಹಿತಿಂಡಿ ವಿಭಾಗದಲ್ಲಿ ರಕ್ಷಿತಾ ಶೆಟ್ಟಿ ಕನ್ಯಾನ ದ್ವಿತೀಯ, ಕಾರ ತಿಂಡಿ ವಿಭಾಗದಲ್ಲಿ ಜಯಲಕ್ಷ್ಮೀ ಪ್ರಭು ದ್ವಿತೀಯ, ಹೂಕಟ್ಟುವ ಸ್ಪರ್ಧೆಯಲ್ಲಿ ಪುಷ್ಪಾ ಪ್ರಥಮ, ಕಾವ್ಯಲಕ್ಷ್ಮೀ ದ್ವಿತೀಯ ಬಹುಮಾನ ಪಡೆದರು.

ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಸುರೇಶ್ ರೈ ಎ., ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ.ಶೆಟ್ಟಿ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಯೋಜನಾಽಕಾರಿ ಕಿರಣ್ ಉರ್ವ, ಶ್ರೀ ಗುರುದೇವ ವಿದ್ಯಾ ಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ ಮತ್ತಿತರರು ಉಪಸ್ಥಿತರಿದ್ದರು.

ಯಶವಂತ ವಿಟ್ಲ ಸ್ವಾಗತಿಸಿದರು. ಲೀಲಾ ಕೆ. ವಂದಿಸಿದರು. ಬೆಳ್ತಂಗಡಿ ತಾಲೂಕು ಮೇಲ್ವಿಚಾರಕ ಬಿ.ಯಶೋಧರ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.