ಜಿಲ್ಲೆ

ತುಳುನಾಡಿನ ಆಚಾರ-ವಿಚಾರಗಳ ಅರಿವು - ಶ್ರೀ ಗುರುದೇವಾನಂದ ಸ್ವಾಮೀಜಿ ಆಶಯ - ಒಡಿಯೂರಿನಲ್ಲಿ ಆಟಿ ಮುಗಿತಲ ಲೇಸ್

Mangaluru - Nishantha Narayana

ವಿಟ್ಲ: ಭಾಷೆ, ದೇಶ, ಸಂಸ್ಕೃತಿ, ಸಂಸ್ಕಾರ ನಮ್ಮದೆಂಬ ಪ್ರೀತಿ ಇರಬೇಕು. ತುಳು ವೈವಿಧ್ಯಮಯ ಭಾಷೆಯಾಗಿದ್ದು, ತುಳುನಾಡಿಗೆ ಅದರದ್ದೇ ಆದ ಸ್ಥಾನಮಾನವಿದೆ. ತುಳುನಾಡಿನ ಆಚಾರ-ವಿಚಾರಗಳ ಅರಿವು ನಮ್ಮಲ್ಲಿದ್ದು ಪ್ರಾಚೀನ ಪದ್ಧತಿಗಳನ್ನು ಮುಂದುವರೆಸುವ ಪ್ರಯತ್ನ ಮಾಡಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.


ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಒಡಿಯೂರ್ದ ತುಳುಕೂಟದ ಆಶ್ರಯದಲ್ಲಿ ಶುಕ್ರವಾರ ಜರುಗಿದ ‘ಆಟಿ ಮುಗಿತಲ ಲೇಸ್’ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಲಾಭಾಂಶದ ಚೆಕ್ ವಿತರಣೆ ನಡೆಯಿತು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ, ಮಂಗಳೂರಿನ ಉದ್ಯಮಿ ಭರತ್ ಭೂಷಣ್, ಗೀತಾ ಭರತ್ ಭೂಷಣ್, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ ಉಪಸ್ಥಿತರಿದ್ದರು.

ಒಡಿಯೂರುದ ತುಳುಕೂಟದ ಅಧ್ಯಕ್ಷ ಯಶವಂತ ವಿಟ್ಲ ಸ್ವಾಗತಿಸಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಬಂಟ್ವಾಳ ಮೇಲ್ವಿಚಾರಕಿ ಲೀಲಾ ಪಾದೆಕಲ್ಲು ಕಾರ್ಯಕ್ರಮ ನಿರೂಪಿಸಿದರು.