ಜಿಲ್ಲೆ

ಮೈಸೂರಿನಲ್ಲಿ ಡಿ.10 ರಿಂದ ಒಡಿಸ್ಸಿ ನೃತ್ಯೋತ್ಸವ

ಮೈಸೂರು: ನಗರದ ರುದ್ರ ನೃತ್ಯಯೋಗ ಶಾಲೆ, ಒಡಿಸ್ಸಿ ಇಂಟರ್‌ನ್ಯಾಷನಲ್ ಫೋರಂ, ಪುರಿ ಜಗನ್ನಾಥ ಕಲ್ಚರಲ್ ಆ್ಯಂಡ್ ವೆಲ್ಫೇರ್ ಟ್ರಸ್ಟ್ ವತಿಯಿಂದ ರಾಮಕೃಷ್ಣ ನಗರದ ರಮಾಗೋವಿಂದ ರಂಗ ಮಂದಿರದಲ್ಲಿ ಸಂಜೆ 5.30ಕ್ಕೆ ಒಡಿಸ್ಸಿ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ನೃತ್ಯಶಾಲೆಯ ಸಂಸ್ಥಾಪಕಿ ಸಿಂಧು ಕಿರಣ್ ಹೇಳಿದರು.

ರಾಜ್ಯದ ವಿವಿಧೆಡೆಗಳಿಂದ ಆಗಮಿಸುವ ಹೆಸರಾಂತ ಒಡಿಸ್ಸಿ ನೃತ್ಯ ಕಲಾವಿದರು ಒಡಿಸ್ಸಿ ಉತ್ಸವದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಅತಿಥಿಗಳಾಗಿ ಅಂತಾರಾಷ್ಟ್ರೀಯ ಒಡಿಸ್ಸಿ ನೃತ್ಯ ಮಹೋತ್ಸವದ ಸಂಸ್ಥಾಪಕ ಶಾಮ್ ಹರಿಚಕ್ರ, ಪುರಿ ಜಗನ್ನಾಥ ಕಲ್ಚರಲ್ ಆ್ಯಂಡ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಘನಶ್ಯಾಮ ಪ್ರಧಾನ್, ಮೈಸೂರಿನ ಭೂಷಣ್ ಪ್ರದರ್ಶಕ ಕಲೆಗಳ ಅಕಾಡೆಮಿಯ ಸಂಸ್ಥಾಪಕ ಬದ್ರಿ ದಿವ್ಯ ಭೂಷಣ್ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಒಡಿಸ್ಸಿ ನೃತ್ಯ ಉತ್ಸವದಲ್ಲಿ ಬೆಂಗಳೂರಿನ ಚೈತ್ರಾ ದಾಸೇ ಗೌಡ, ಸೋಹಿನಿ ಬೋಸ್ ಬ್ಯಾನರ್ಜಿ, ಅನುಶ್ರೀ ಪದ್ಮನಾಭ, ಬೀದರ್‌ನ ಜ್ಯೋತಿ ಪ್ರವ, ಸಮಂಥರಿ, ನವದೆಹಲಿಯ ಸುದರ್ಶನ ಸಾಹೋ, ಮೈಸೂರಿನ ಸಿಂಧು ಕಿರಣ್, ಸಮ ವೇದ್‌ಮೂಲ, ಹರ್ಷ ಪವಿತ್ರನ್, ಪೃಥೆ ಹವಾಲ್ದಾರ್, ಸ್ತುತ್ಯಶ್ರೀ, ಬೆಂಗಳೂರಿನ ಸರಿತಾ ಮಿಶ್ರ, ಅನಹಿತಾ ಗುಂಜೋ, ಸಹನ ಕಕ್ರಾಲ್, ಸಾಯಿ ಸೃಷ್ಟಿರಥ್, ಮಾನಸಿ ನಾಯಕ್, ಇಷಾ ಅನುಜ್ ಸಿಂಘಾಲ್, ಶರ್ಮಿಳಾ ಮುಖರ್ಜಿ, ಸುರ್ಜಿತ್ ಸೋಮ್‌, ಶ್ರೀರ್ಜಿತ್ ಸನ್ಯಾಲ್, ಬಿ.ಟಿ. ರವಿಶಂಕರ್, ಶ್ವೇತಾ ಶ್ರೀಧರನ್, ನಂದಿತಾ ಭಟ್ಟಾಚಾರ್ಯ, ಶ್ರೆಯಾಂಶಿ ದಾಸ್, ಜಾಹ್ನವಿ ಮುದುಳಿ, ಪ್ರೀತಿ ಬ್ಯಾನರ್ಜಿ ನೃತ್ಯ ಪ್ರದರ್ಶನ ನೀಡಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ನೃತ್ಯಪಟುಗಳಾದ ವಿನಯ್ ನರಹರಿ, ಪೃಥೆ ಹವಾಲ್ದಾರ್, ಘನಶಾಮ್ ಪ್ರಧಾನ್ ಹಾಗೂ ಇತರರು ಇದ್ದರು.