ಜಿಲ್ಲೆ

ಸಮಾಜ ಸುಧಾರಕ ಡಾ. ಕೋರೆ

ಮರಿದೇವ ಹೂಗಾರ

ಹುಬ್ಬಳ್ಳಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು 77 ನೇ ಜನ್ಮ ದಿನ ನಿಮಿತ್ತ ನಗರದ ಜೆ.ಜಿ. ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಐವತ್ತು ಸಸಿ ನೆಡಲಾಯಿತು.
ಪದವಿ ಪ್ರಾಚಾರ್ಯ ಎಸ್.ಎಲ್. ಪಾಟೀಲ ಮಾತನಾಡಿ, ಡಾ. ಪ್ರಭಾಕರ ಕೋರೆ ಅವರು ಸಮಾಜಕ್ಕೆ ಅಗತ್ಯವಿರುವ ಆರೋಗ್ಯ, ಶಿಕ್ಷಣ ಮತ್ತು ಕೃಷಿಗೆ ಸಂಬಂಧಿಸಿದ ಸೌಕರ್ಯ ಕೊಡುತ್ತಿದ್ದಾರೆ. ಇಂತಹ ಸಮಾಜಮುಖಿ ಕೋರೆ ಅವರು ನಮ್ಮ ಉತ್ತರ ಕರ್ನಾಟಕದ ಸಮಾಜದ ಸುಧಾರಕ ಎಂದು ಬಣ್ಣಿಸಿದರು.
ಇದೇ ವೇಳೆ ಡಾ. ಪ್ರಭಾಕರ ಕೋರೆ ಅವರ ಸಾಧನೆ ಕುರಿತು ಕಿರುಚಿತ್ರ ಪ್ರದರ್ಶಿಸಲಾಯಿತು. ಪದವಿ ಪೂರ್ವ ಪ್ರಾಚಾರ್ಯ ಡಾ.ದತ್ತುಕೃಷ್ಣ ವಾಘಮೋಡೆ ಮಾತಾನಾಡಿದರು.
ಪ್ರೊ. ಮಲ್ಲಮ್ಮ ಯಾಟಗಲ್, ಡಾ. ಗೀತಾ ಕರಾಡೆ , ಡಾ. ನೇತ್ರಾವತಿ ಗಬ್ಬೂರ, ಪ್ರೊ. ಗೀತಾ ಪಾಟೀಲ ಇತರರು ಉಪಸ್ಥಿತರಿದ್ದರು.