ತೆಕ್ಕಲಕೋಟೆಯಲ್ಲಿ ಸರ್ಕಾರಿ ಭೂಮಿ ಸರ್ವೇ ಸಂದರ್ಭ ಪಪಂ ಅಧ್ಯಕ್ಷ ಎಸ್.ಆನಂದ, ಮಾಜಿ ಉಪಾಧ್ಯಕ್ಷ ಪರಮೇಶ, ಕಾಂಗ್ರೆಸ್ ಮುಖಂಡ ನರೇಂದ್ರ ಸಿಂಹ, ಸ್ಥಾಯಿ ಸಮಿತಿ ಅಧ್ಯಕ್ಷ ಖಾದರ್ ವಲಿ, ಸದಸ್ಯ ನಾಸಿರುದ್ದೀನ್ ಇತರರಿದ್ದರು. 
ಜಿಲ್ಲೆ

ಒತ್ತುವರಿ ಜಾಗ ಅಭಿವೃದ್ಧಿಗೆ ಬಳಕೆ

Kopala - Desk - Eraveni

ಸಿರಗುಪ್ಪ: ಸರ್ಕಾರಿ ಭೂಮಿ ಸರ್ವೇ ಆರಂಭವಾಗಿದ್ದು, ಈ ಜಾಗವನ್ನು ಪಟ್ಟಣದ ಅಭಿವೃದ್ಧಿಗೆ ಬಳಸಲಾಗುವುದು ಎಂದು ತೆಕ್ಕಲಕೋಟೆ ಪಪಂ ಅಧ್ಯಕ್ಷ ಎಸ್.ಆನಂದ ಹೇಳಿದರು.

ಇದನ್ನೂ ಓದಿ:

ಸರ್ಕಾರಿ ಭೂಮಿ ಸರ್ವೇ ವೇಳೆ ಮಾತನಾಡಿದ ಅವರು, ಸರ್ಕಾರಿ ಭೂಮಿ ಒತ್ತುವರಿ ನಡೆದಿದೆ. ಅದಕ್ಕಾಗಿ ಸರ್ವೇ ನಡೆಸಿ ಗಡಿ ಗುರುತಿಸುವಂತೆ ಪಪಂನಿಂದ ಡಿಸಿಗೆ ಮನವಿ ಸಲ್ಲಿಸಲಾಗಿತು.್ತ ಈ ಹಿನ್ನೆಲೆ ಕಂದಾಯ ಇಲಾಖೆ ಗ್ರಾಮಾಭಿವೃದ್ಧಿ ಅಧಿಕಾರಿ ಶಿವರಾಜ್ ಹಾಗೂ ತಾಲೂಕು ಸರ್ವೇಯರ್ ಮಲ್ಲಿಕಾರ್ಜುನ ನೇತೃತ್ವದಲ್ಲಿ ಕಾಯಾಚರಣೆ ನಡೆಸುವಂತೆ ತಾಲೂಕು ಆಡಳಿತ ಸೂಚಿಸಿತ್ತು.

ಉಪ್ಪಾರ ಹೊಸಹಳ್ಳಿ ಗಡಿಗೆ ಹೊಂದಿಕೊಂಡ ಸರ್ವೇ ನಂಬರ್ 1ರಲ್ಲಿ ಕ್ರೀಡಾಂಗಣಕ್ಕಾಗಿ ಆರು ಎಕರೆ, ಸ್ಮಶಾನಕ್ಕೆ 10 ಎಕರೆ ಗುರುತಿಸಲಾಗಿದೆ. ಸರ್ವೇ ನಂಬರ್ 819 ಹಾಗೂ 862 ರಲ್ಲಿ ಕೆರೆಗಾಗಿ 15 ರಿಂದ 20 ಎಕರೆ ಗುರುತಿಸಲು ಡ್ರೋನ್ ಮೂಲಕ ಸರ್ವೇ ಮಾಡಲಾಗುವುದು ಎಂದು ತಿಳಿಸಿದರು. ಕಾಂಗ್ರೆಸ್ ಮುಖಂಡ ನರೇಂದ್ರ ಸಿಂಹ, ಪಪಂ ಮಾಜಿ ಉಪಾಧ್ಯಕ್ಷ ಪರಮೇಶ, ಸ್ಥಾಯಿ ಸಮಿತಿ ಅಧ್ಯಕ್ಷ ಖಾದರ್ ವಲಿ, ಸದಸ್ಯ ನಾಸಿರುದ್ದೀನ್ ಇತರರಿದ್ದರು.