ಜಿಲ್ಲೆ

ಪ್ರೀತಿ ವಿಷಯಕ್ಕೆ ಮನನೊಂದು ಆತ್ಮಹತ್ಯೆ

ಹುಬ್ಬಳ್ಳಿ: ಪ್ರೀತಿಯ ವಿಷಯವಾಗಿ ಮನನೊಂದು ಇಲ್ಲಿಯ ಕೋಳೆಕರ್ ಪ್ಲಾಟ್‌ನಲ್ಲಿ ಯುವಕನೊಬ್ಬ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಕೋಳೆಕರ ಪ್ಲಾಟ್ ನಿವಾಸಿ ಅಬ್ಬಾಸ್‌ಅಲಿ ಜಾಫರ್‌ಸಾಬ್ ಶಿರಹಟ್ಟಿ(19) ಮೃತ ಯುವಕ. ಲವ್ ವಿಚಾರವಾಗಿ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಸಬಾಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.