ಮೈಸೂರು: ಜಾತಿ ಗಣತಿ ವರದಿಯನ್ನು ಬಿಜೆಪಿ ಹಾಗೂ ಜೆಡಿಎಸ್ ವಿರೋಧಿಸುತ್ತಿರುವುದು ಸರಿಯಲ್ಲ. ಒಂದು ವೇಳೆ ವರದಿಯ ಮೂಲಪ್ರತಿ ಕಳವಾಗಿದ್ದರೆ, ಘಟನೆ ನಡೆದ ವೇಳೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವೇ ಅದಕ್ಕೆ ಕಾರಣ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಆರೋಪಿಸಿದರು.
- ಅಂದಿನ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರೇ ಕಳವು ಮಾಡಿಸಿರಬಹುದು. ಜತೆಗೆ, ಅದು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವರದಿಯೇ ಆಗಿದೆ. ಹೀಗಾಗಿ ಅದನ್ನು ವಿರೋಧಿಸುವುದು ಸರಿಯಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
- ರಾಜೀನಾಮೆ ನೀಡಿ ಹೊರಬರಲಿ: ಡಿಸಿಎಂ ಆಗಿರುವ ಡಿ.ಕೆ.ಶಿವಕುಮಾರ್ ವರದಿ ವಿರೋಧಿಸುವ ಒಂದು ಸಮುದಾಯದ ಪತ್ರಕ್ಕೆ ಸಹಿ ಹಾಕಬಾರದಿತ್ತು. ಸಚಿವ ಸಂಪುಟದಲ್ಲಿರುವವರು ಒಂದು ವೇಳೆ ವರದಿ ಸಮರ್ಥಿಸಿಕೊಳ್ಳಲಾಗದಿದ್ದರೆ ರಾಜೀನಾಮೆ ನೀಡಿ ಹೊರಬರಲಿ ಎಂದು ತಾಕೀತು ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರವಿನಂದನ್, ಎಸ್.ರಾಜೇಶ್, ಲೋಕೇಶ್ ಮಾದಾಪುರ ಹಾಜರಿದ್ದರು.