ಜಿಲ್ಲೆ

ಜೆಸಿಬಿ ಯಂತ್ರಕ್ಕೆ ಅಡ್ಡ ಕುಳಿತ ರೈತರು

Davangere - Desk - Ganesh M K

ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯ ಕೊಮಾರನಹಳ್ಳಿ ಗ್ರಾಮದ ಸರ್ವೇ ನಂ. 59ರ 2ಎಕರೆ 20 ಗುಂಟೆ ಜಮೀನಿನಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮಾಡುವುದಕ್ಕೆ ರೈತರು ಆಕ್ಷೇಪ ವ್ಯಕ್ತಪಡಿಸಿದರು.

ಗುರುವಾರ ತಹಸೀಲ್ದಾರ್ ಪೃಥ್ವಿ ಸಾನಿಕಂ ಹಾಗೂ ಸಿಬ್ಬಂದಿ ಸ್ಥಳಕ್ಕೆ ಬಂದಾಗ, ರೈತರು ವಿರೋಧ ವ್ಯಕ್ತಪಡಿಸಿ ಜೆಸಿಬಿ ಯಂತ್ರಕ್ಕೆ ಅಡ್ಡ ಕುಳಿತು ಆಕ್ರೋಶ ವ್ಯಕ್ತಪಡಿಸಿದರು. ಆಗ ಪೊಲೀಸರು ರೈತರನ್ನು ವಶಕ್ಕೆ ಪಡೆದರು.

ಜಮೀನಿನಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಯಿಂದ ನಮಗೆ ತೊಂದರೆಯಾಗುತ್ತದೆ. ಹಾಗಾಗಿ, ಇಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಬೇಡ ಎಂದು ಒತ್ತಾಯಿಸಿದರು.

ಆದರೆ, ರೈತರ ಪ್ರತಿರೋಧದ ನಡುವೆಯೂ ಅಧಿಕಾರಿಗಳು ಜೆಸಿಬಿ ಬಳಸಿ ಗುಂಡಿ ತೆಗೆಸಿದರು. ಜತೆಗೆ, ಸ್ಥಳ ಗುರುತಿಸಿ ನಾಮಫಲಕ ಅಳವಡಿಸಿ ಅಲ್ಲಿಂದ ತೆರಳಿದರು.

ರೈತ ಮುಖಂಡರಾದ ವಿಜಯಕುಮಾರ್, ಬೋವಿ ಕುಮಾರ್, ಆದಾಪುರದ ವೀರಭದ್ರಪ್ಪ ಮಾತನಾಡಿ, ರೈತರ ಜಮೀನು ವಶಪಡಿಸಿಕೊಳ್ಳುವವರ ವಿರುದ್ಧ ಹೋರಾಟ ನಡೆಸುವುದಾಗಿ ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್, ಉಪತಹಸೀಲ್ದಾರ್ ಆರ್. ರವಿ, ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಆಡಳಿತ ಅಧಿಕಾರಿ ಅಣ್ಣಪ್ಪ, ಸಿಪಿಐ ಸುರೇಶ್ ಸಗರಿ, ಪಿಎಸ್‌ಐ ಪ್ರಭು ಕೆಳಗಿನ ಮನೆ ಇದ್ದರು. ಬಿಗಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು.