ಜಿಲ್ಲೆ

ಮತಾಂತರಕ್ಕೆ ಪ್ರಯತ್ನ; ಪಾಸ್ಟರ್​ಗಳನ್ನು ತರಾಟೆಗೆ ತೆಗೆದುಕೊಂಡು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

Webdesk - Ravikanth

ದಾವಣಗೆರೆ: ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರನ್ನು ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡಿರುವ ಗ್ರಾಮಸ್ಥರು, ಕೊನೆಗೆ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆ ಮೂಲಕ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಮತಾಂತರ ಪ್ರಯತ್ನಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದೆ ಎನ್ನಲಾಗಿದೆ.

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹಿಂಡಸಘಟ್ಟ ಗ್ರಾಮದ ಮಟ್ಟಿ ಕ್ಯಾಂಪ್​ನಲ್ಲಿ ಮತಾಂತರಕ್ಕೆ ಪ್ರಯತ್ನ ಮಾಡುತ್ತಿದ್ದ ಇಬ್ಬರು ಪಾಸ್ಟರ್​ಗಳನ್ನು ಗ್ರಾಮದ ಮುಖಂಡರು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಟ್ಟಿ ಕ್ಯಾಂಪ್​ನ ಮನೆಯೊಂದರಲ್ಲಿ ಯಜಮಾಣ ಅನಾರೋಗ್ಯದಿಂದ ನರಳುತ್ತಿದ್ದಾಗ ಏಸುವಿನ ಪ್ರಾರ್ಥನೆ ಮಾಡಿದರೆ ಗುಣವಾಗುತ್ತದೆ ಎಂದು ಈ ಪಾಸ್ಟರ್​ಗಳು ನಂಬಿಸಿದ್ದರು. ಮಾತ್ರವಲ್ಲ ಮಟ್ಟಿ ಕ್ಯಾಂಪ್​ನ ಜನರ ಹಿಂದೆ ಹಲವು ದಿನಗಳಿಂದ ಬಿದ್ದಿರುವ ಇವರು ಮತಾಂತರಕ್ಕೆ ನಿರಂತರ ಪ್ರಯತ್ನ ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಗ್ರಾಮದ ಮುಖಂಡರು ಅವರ ಪ್ರಯತ್ನಕ್ಕೆ ಆಕ್ಷೇಪಿಸಿ, ಮಲೆಬೆನ್ನೂರು ಪೊಲೀಸರಿಗೆ ಒಪ್ಪಿಸಿದ್ದಾರೆ.