ಸಿರವಾರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕ ಸೂಗೂರೇಶ್ವರ ತಾಳಿಕೋಟಿಗೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಎಂ.ಡಿ ಉಸ್ಮಾನ್, ವಿರುಪಾಕ್ಷ ಮೊಬೈಲ್ ಗುರುವಾರ ಮರಳಿ ನೀಡಿದರು.  
ಜಿಲ್ಲೆ

ಕಳೆದಿದ್ದ ಮೊಬೈಲ್ ಮರಳಿಸಿದ ಕೆಕೆಆರ್‌ಟಿಸಿ ಸಿಬ್ಬಂದಿ

ಅರಕೇರಾ: ಮೊಬೈಲ್ ಕಳೆದುಕೊಂಡಿದ್ದ ಪ್ರಯಾಣಿಕನಿಗೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಪೋನ್‌ನ್ನು ಸಿರವಾರ ಬಸ್ ನಿಲ್ದಾಣದಲ್ಲಿ ಗುರುವಾರ ಮರಳಿ ನೀಡಿ ಮಾನವೀಯತೆ ಮರೆದಿದ್ದಾರೆ.

ಮಾನವೀಯತೆ ಮೆರೆದ ಕೆಕೆಆರ್‌ಟಿಸಿ ಸಿಬ್ಬಂದಿ

ಜು.19 ರಂದು ಬಸ್‌ನಲ್ಲಿ ರಾಯಚೂರಿನಿಂದ ಸಿರವಾರಕ್ಕೆ ಪ್ರಯಾಣಿಸುವಾಗ ಅರಕೇರಾದ ನಿವಾಸಿ ಸೂಗೂರೇಶ್ವರ ತಾಳಿಕೋಟಿ ಮೊಬೈಲ್ ಕಳೆದುಕೊಂಡಿದ್ದರು. ಸೇವೆಯಲ್ಲಿದ್ದ ಚಾಲಕ ಎಂ.ಡಿ ಉಸ್ಮಾನ್, ಚಾಲಕ ಕಂ ನಿರ್ವಾಹಕ ವಿರುಪಾಕ್ಷಗೆ ಸಿಕ್ಕಿದೆ. ಮೊಬೈಲ್‌ಗೆ ಬಂದ ಕರೆಗಳನ್ನು ಸ್ವೀಕರಿಸಿ ಮೂಬೈಲ್ ದೊರೆತಿರುವುದು ತಿಳಿಸಿದ್ದಾರೆ.