ಸುಂಟಿಕೊಪ್ಪ ಆಟೋ ಚಾಲಕರ ನಿಲ್ದಾಣಕ್ಕೆ ಶಿವರಾಮ್ ದಿಢೀರ್ ಬೇಟಿ ನೀಡಿ ಪರಿಶೀಲನೆ ನಡೆಸಿದರು. 
ಜಿಲ್ಲೆ

ಸಂಚಾರ ನಿಯಮ ಪಾಲನೆ ಕಡ್ಡಾಯ

ಅಭಿನಯ್ ಎಚ್.ಎಂ

ಸುಂಟಿಕೊಪ್ಪ: ಚಾಲಕರು ವಾಹನಗಳನ್ನು ಚಲಾಯಿಸುವಾಗ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿ ಶಿವರಾಮ್ ತಿಳಿಸಿದರು.

ಇಲ್ಲಿನ ಆಟೋ ಚಾಲಕರ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಸುಂಟಿಕೊಪ್ಪ ಪಂಚಾಯಿತಿ ವ್ಯಾಪ್ತಿಯಲ್ಲಿ 250 ಕ್ಕೂ ಹೆಚ್ಚು ಆಟೋಗಳು ಸಂಚರಿಸುತ್ತಿದ್ದು, ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದರು.

ಪಟ್ಟಣದಲ್ಲಿ ಸಂಚರಿಸುತ್ತಿರುವ ಕೆಲವು ಆಟೋರಿಕ್ಷಾ ಮಾಲೀಕರು ತಮಗೆ ಬೇಕಾದಂತೆ ಆಟೋಗಳನ್ನು ವಿಸ್ಯಾಸ ಗೊಳಿಸಿಕೊಂಡಿದ್ದಾರೆ. ಅವುಗಳನ್ನು ತೆರವುಗೊಳಿಸಬೇಕು. ಅಲ್ಲದೆ ವಾಹನ ಚಾಲನೆ ಮಾಡುವಾಗ ಚಾಲನಾ ಪರವಾನಗಿ, ದಾಖಲಾತಿ ಹಾಗೂ ಸಮವಸ್ತ್ರ ಕಡ್ಡಾಯವಾಗಿ ಹೊಂದಿರಬೇಕು ಎಂದು ಸೂಚಿಸಿದರು

ಆಟೋಚಾಲಕರ ಸಂಘದ ಅಧ್ಯಕ್ಷ ಸುನೀಲ್, ಸಾರಿಗೆ ಇಲಾಖೆ ಸಿಬ್ಬಂದಿ ಹಾಗೂ ಇತರರು ಹಾಜರಿದ್ದರು.