ಹನುಮಸಾಗರದ ಗ್ರಾಪಂ ಕಾರ್ಯಾಲಯದಲ್ಲಿ ಭಾನುವಾರ ಮಾಜಿ ಸಿಎಂ ಡಿ.ದೇವರಾಜ ಅರಸು ಜಯಂತಿ ಆಚರಿಸಲಾಯಿತು. ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಪಿಡಿಒ ದೇವೇಂದ್ರಪ್ಪ ಕಮತರ, ಸಿಡಿಪಿಒ ಯಲ್ಲಮ್ಮ, ಬಿಸಿಎಂ ನಿಲಯ ಮೇಲ್ವಿಚಾರಕ ರಾಘವೇಂದ್ರ ಹುಲಿ, ಅಂಗನವಾಡಿ ಮೇಲ್ವಿಚಾರಿಕಿ ಮಂಜುಳಾ ಹಕ್ಕಿ ಇತರರಿದ್ದರು. 
ಜಿಲ್ಲೆ

ಹಿಂದುಳಿದ ವರ್ಗಗಳ ಹರಿಕಾರಗೆ ನಮನ

Gangavati - Desk - Veeresh S Ullagaddi

ಹನುಮಸಾಗರ: ಮಾಜಿ ಸಿಎಂ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದ್ದಾರೆ ಎಂದು ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಹೇಳಿದರು.


ಪಟ್ಟಣದ ಗ್ರಾಪಂ ಕಾರ್ಯಾಲಯದಲ್ಲಿ ಭಾನುವಾರ ಡಿ. ದೇವರಾಜ ಅರಸು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಡಿ. ದೇವರಾಜ ಅರಸು ಮಾಡಿರುವ ಕಾರ್ಯಗಳು ಶ್ಲಾಘನೀಯ. ಭೂ ಸುಧಾರಣೆ ಮತ್ತು ಉಳುವವನೇ ಭೂಮಿ ಒಡೆಯ ಕಾನೂನು ಜಾರಿಗೆ ತಂದು ದುಡಿಯುವ ವರ್ಗಕ್ಕೆ ಅನ್ನದಾತರಾದರು ಎಂದರು.


ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಡಿ. ದೇವರಾಜ ಅರಸು ಭಾವಚಿತ್ರಕ್ಕೆ ಪೂಷ್ಪಾರ್ಚನೆ ಮಾಡಿದರು. ಪಿಡಿಒ ದೇವೇಂದ್ರಪ್ಪ ಕಮತರ ಸದ್ಭಾವನಾ ದಿನದ ನಿಮಿತ್ತ ಪ್ರತಿಜ್ಞಾ ವಿಧಿ ಬೋದಿಸಿದರು. ತಾಪಂ ಇಒ ಶಿವಪ್ಪ ಸುಬೇದಾರ, ಸಿಡಿಪಿಒ ಯಲ್ಲಮ್ಮ, ಬಿಸಿಎಂ ನಿಲಯ ಮೇಲ್ವಿಚಾರಕ ರಾಘವೇಂದ್ರ ಹುಲಿ, ಅಂಗನವಾಡಿ ಮೇಲ್ವಿಚಾರಿಕಿ ಮಂಜುಳಾ ಹಕ್ಕಿ, ಎಸ್‌ಡಿಎ ವೀರನಗೌಡ ಪಾಟೀಲ್, ಗ್ರಾಪಂ ಸದಸ್ಯರು, ಸಿಬ್ಬಂದಿಗಳು, ಮುಖಂಡರು ಇದ್ದರು.


ಬಾಲಕಿಯರ ಸಹಿಪ್ರಾ ಶಾಲೆ: ಬಾಲಕಿಯರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ದೇವರಾಜ ಅರಸು ಜಯಂತಿ ಆಚರಿಸಲಾಯಿತು. ಮುಖ್ಯಶಿಕ್ಷಕ ನಂದಲಾಲ ದಲಬಂಜನ, ಶಶಿಧರ ಅಕ್ಕಿ, ಎಸ್ಡಿಎಂಸಿ ಅಧ್ಯಕ್ಷ ಹುಲ್ಲಪ್ಪ ಗಡೇಕಾರ ಇದ್ದರು.


ಕುರುಬಗೇರಾ ಶಾಲೆ: ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ದೇವರಾಜ ಅರಸು ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಮುಖ್ಯಶಿಕ್ಷಕ ಹನುಮಂತಪ್ಪ ಎಚ್., ಶಿಕ್ಷಕರಾದ ಚಂದಪ್ಪ ಹಕ್ಕಿ, ಭರಮಪ್ಪ ಕಂಡೇಕಾರ ಇತರರಿದ್ದರು.