ಕಮತಗಿ: ಗುರುಪೂರ್ಣಿಮೆ, ಕಡ್ಲಿಗರ ಹುಣ್ಣಿಮೆ ನಿಮಿತ್ತ ಅಂಬಿಗರ-ಗಂಗಾಮತ ಸಮಾಜದಿಂದ ಬುಧವಾರ ಗಂಗಾಪರಮೇಶ್ವರಿ, ಮಹರ್ಷಿ ವೇದವ್ಯಾಸ ಅಂಬಿಗರ ಚೌಡಯ್ಯನವರ ಭಾವಚಿತ್ರ ಮೆರವಣಿಗೆ, ಗಂಗಾಪೂಜೆ ನೆರವೇರಿಸಲಾಯಿತು.
ಸ್ಥಳೀಯ ಗಂಗಾಮತ ಸಮುದಾಯ ಭವನದಿಂದ ಮೆರವಣಿಗೆಯಲ್ಲಿ ಮಲಪ್ರಭಾ ನದಿಗೆ ತೆರಳಿ ಗಂಗಾಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಂಚರಿಸಿತು. ಮುತ್ತೈದೆಯರು ಕಳಸದಾರತಿ ಜತೆಗೆ ಪಾಲ್ಗೊಂಡಿದ್ದರು.
ಸಮಾಜದ ಹಿರಿಯ ಯಮನಪ್ಪ ಮಡಿಕೇರಿ, ಯಮನಪ್ಪ ಬನ್ನಿದಿನ್ನಿ, ಸುರೇಶ ಮಡಿಕೇರಿ, ಅಶೋಕ ಇಟಗಿ, ಹುಚ್ಚಪ್ಪ ಬನ್ನಿದಿನ್ನಿ, ಹನಮಂತ ಇಲಕಲ್ಲ, ಪರಸಪ್ಪ ಸುಣಗಾರ, ಗಂಗಪ್ಪ ಸುಣಗಾರ, ಬಸಪ್ಪ ಮಡಿಕೇರಿ, ಪರಸುರಾಮ ಮಂಗಳಗುಡ್ಡ, ರಮೇಶ ಇಲಕಲ್ಲ ಗಂಗಾಧರ ದಳವಾಯಿ, ಮಾಳಪ್ಪ ಮಂಗಳಗುಡ್ಡ, ಮಂಜುನಾಥ ಮಡಿಕೇರಿ, ಮಂಜು ಭೋವಿ, ಚನ್ನವ್ವ ಬನ್ನಿದಿನ್ನಿ, ಶಿವಗಂಗವ್ವ ಮಡಿಕೇರಿ, ಗಂಗವ್ವ ಬನ್ನಿದಿನ್ನಿ, ಮಲ್ಲವ್ವ ಬನ್ನಿದಿನ್ನಿ, ನೀಲವ್ವ ಬನ್ನಿದಿನ್ನಿ, ಭಾರತಿ ಮಡಿಕೇರಿ, ಮಲವ್ವ ಮಡಿಕೇರಿ ಇತರರಿದ್ದರು.